ಕಾಳಸಂತೆಯಲ್ಲಿ ರೆಮ್ದಿಸಿವರ್ ಇಂಜಕ್ಷನ್ ಮಾರಾಟ: ಐವರ ಬಂಧನ

ಮೈಸೂರು: ಕಾಳಸಂತೆಯಲ್ಲಿ ರೆಮ್ದಿಸಿವರ್ ಇಂಜಕ್ಷನ್ ಅನ್ನು ಮಾರಾಟ ಮಾಡುತ್ತಿದ್ದ ಐವರನ್ನು ನಗರದ ಸಿ.ಸಿ.ಬಿ ಪೆÇಲೀಸರು ಬಂಧಿಸಿದ್ದಾರೆ.
ಮೈಸೂರಿನ ಜೆ.ಪಿ.ನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಸ್ಟಾಪ್ ನರ್ಸ್ ಜಿ. ಸುರೇಶ್ (27), ಕೆ.ಆರ್. ಆಸ್ಪತ್ರೆ ಇನ್ಸ್‍ಟಿಟ್ಯೂಟ್ ಆಪ್ ನೆಪೆÇ್ರೀ & ನ್ಯೂರೋ ಸ್ಟಾಪ್ ನರ್ಸ್ ಡಿ.ಎಂ. ರಾಘವೇಂದ್ರ (27), ಕೆ.ಆರ್.ಆಸ್ಪತ್ರೆ ಸ್ಟಾಪ್ ನರ್ಸ್ ಅಶೋಕ (31) ಬಂಧಿತ ಆರೋಪಿಗಳು.
ಆರೋಪಿ ಸುರೇಶ ತಾನು ಕೆಲಸ ಮಾಡುವ ಆಸ್ಪತ್ರೆಯ ಕೋವಿಡ್-19 ಸೋಂಕಿತ ರೋಗಿಗಳಿಗೆ ನೀಡಲು ಕೊಟ್ಟಿದ್ದ ರೆಮ್ದಿಸಿವರ್ ಇಂಜಕ್ಷನ್ ಗಳನ್ನು ರೋಗಿಗಳಿಗೆ ನೀಡದೇ ತೆಗೆದುಕೊಂಡು ಬಂದು ಅವುಗಳನ್ನು ಇತರೆ ಆರೋಪಿಗಳ ಸಹಾಯದಿಂದ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ತಿಳಿಸಿದ್ದು, ಈ ಮೇರೆಗೆ ಆರೋಪಿಗಳ ಬಳಿಯಿದ್ದ 4 ರೆಮ್ದಿಸಿವರ್ ಇಂಜೆಕ್ಷನ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಸಂಪಾದಿಸಿದ್ದ ನಗದು ಹಣ 7000 ರೂಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕೃಷ್ಣರಾಜ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಿ.ಸಿ.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ನರಸಿಂಹರಾಜ ಪೆÇಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದಲ್ಲಿರುವ ವೃದ್ದಾಶ್ರಮದ ಬಳಿ ನಗರದ ವಿದ್ಯಾರಣ್ಯಪುರಂನಲ್ಲಿನ ಗಿರೀಶ್ ಚಂದ್ರ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆ ಸ್ಟಾಪ್ ನರ್ಸ್‍ಗಳಾದ ಕೆ. ರಾಜೇಶ್ (20), ಡಿ. ವಿ. ಮಲ್ಲೇಶ್ (20) ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಬ್ಬರು ಆಸ್ಪತ್ರೆಯ ಕೋವಿಡ್-19 ಸೊಂಕಿತ ರೋಗಿಗಳಿಗೆ ನೀಡಲು ಕೊಟ್ಟಿದ್ದ 6 ರೆಮ್ದಿಸಿವರ್ ಇಂಜಕ್ಷನ್ ಗಳನ್ನು ರೋಗಿಗಳಿಗೆ ನೀಡದೆ ತೆಗೆದುಕೊಂಡು ಬಂದು ಅವುಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಗಳ ವಿರುದ್ದ ನರಸಿಂಹರಾಜ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೈಸೂರು ನಗರದ ಡಿ.ಸಿ.ಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ, ಎಂ.ಎಸ್.ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಸಿ.ಕೆ.ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ ಪೆÇಲೀಸ್ ಇನ್ಸಪೆಕ್ಟರ್ ಗಳಾದ ಆರ್.ಜಗದೀಶ್, ಜಿ. ಶೇಖರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ನಡೆಸಿರುತ್ತಾರೆ.