ಮೈಸೂರಿಗೆ ಕಳಂಕ ತರುವ ಆರೋಪ ಮಾಡಿದವರು ಮೈಸೂರು ಜನರ ಕ್ಷಮೆ ಕೇಳಬೇಕು -ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿಗೆ ಕಳಂಕ ತರುವ ಆರೋಪ ಮಾಡಿದವರು ಮೈಸೂರು ಜನರ ಕ್ಷಮೆ ಕೇಳಬೇಕು ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಕ್ಲೀನ್‍ಚಿಟ್ ಪಡೆದ ವಿಷಯ ಕುರಿತು ಜಿಲ್ಲಾಧಿಕಾರಿ ರೋಹಿಣಿ ಸಿಂಧುರಿ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.
ನಮ್ಮ ಮೇಲಿನ ಆರೋಪ ಇಡೀ ಮೈಸೂರಿಗೆ ಕಳಂಕ ತಂದಿತ್ತು. ಮೈಸೂರಿಗೆ ಕಳಂಕ ತರುವ ಆರೋಪ ಮಾಡಿದವರು ಮೈಸೂರು ಜನರ ಕ್ಷಮೆ ಕೇಳಬೇಕು ಎಂದರು.
ಕಳಬೇಡ, ಕೊಲಬೇಡ ಎಂಬ ಬಸವಣ್ಣನ ವಚನವನ್ನು ಎಲ್ಲರೂ ಮಾರ್ಗಸೂಚಿಯಾಗಿ ಸ್ವೀಕರಿಸಬೇಕು. ನಾಡದೇವತೆ ಚಾಮುಂಡೇಶ್ವರಿ ಸ್ವಲ್ಪ ಕಷ್ಟ ಸಾಧ್ಯವಾದರೂ ಸದ್ಬುದ್ದಿ ಕೊಡಲಿ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಜೆಡಿಎಸ್ ನಾಯಕರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿರುಗೇಟು ನೀಡಿದರು.
ನಾನು ಮೈಸೂರಿಗೆ ಬಂದ ಏಳು ತಿಂಗಳಿಂದಲೂ ಪರ್ಸನಲ್ ಆರೋಪ ಮಾಡ್ತಿದ್ದಾರೆ. ದೇಶಸೇವೆಗಾಗಿ ನಾವು ಕೆಲಸಕ್ಕೆ ಸೇರಿದ್ದೇವೆ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರು ಕೈಜೋಡಿಸಿದಾಗ ಮಾತ್ರ ಜೀವ ರಕ್ಷಣೆ ಸಾಧ್ಯ ಎಂದು ಡಿಸಿ ಅವರು ಹೇಳಿದರು.