ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಅಕ್ರಮ ಮರಳು ಸಾಗಾಣಿಕೆ ಸಂಬಂದ ರಸ್ತೆಯೊಂದರಲ್ಲಿ ನಡೆದ ಅಪಘಾತ ಪ್ರಕರಣ ತಿರುಚಿದ್ದಷ್ಟೆ ಅಲ್ಲದೆ ಮೃತನ ಬಳಿಯಿರುವ ಸಂಪತ್ತನ್ನ ಗೋರಿ ಇಂದಿಗೆ ಒಂದು ವರ್ಷ.
ಆದರೆ ವಿಚಾರಣೆ ಮಾತ್ರ ನಿಗೂಢವಾಗಿದೆ.
ಚಾಮರಾಜನಗರ ಮಾದಾಪುರ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ನವೀನ್ ಎಂಬಾತ ಸಾವನ್ನಪ್ಪಿ ಇಂದಿಗೆ ವರ್ಷವಾಯಿತು.
ಅಪಘಾತ ಪ್ರಕರಣ ಗಂಭೀರವಾಗಿ ಪರಿಗಣಿಸಿ ಅಂದಿನ ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್ ಸಿಂಗ್ ಸೂಕ್ತ ವಿಚಾರಣೆಗೆ ಆದೇಶ ನೀಡಿದ್ದರು.
ನಂತರ ಕೊಳ್ಳೆಗಾಲ ಡಿವೈಸ್ಪಿ ನವೀನ್ ಕುಮಾರ್ & ಶ್ರೀಕಾಂತ್ ತಂಡ ಅಕ್ರಮ ಮರಳು ಸಾಗಾಣಿಕೆ ಸಂಬಂಧ ವರದಿ ಸಿದ್ಧಪಡಿಸಿ ಎಸ್ಪಿ ಹಾಗೂ ಐಜಿಪಿ ಅವರಿಗೆ ವರದಿ ನೀಡಿದ್ದರು.
ತದನಂತರ ಅಂದಿನ ಎಸ್ಪಿ ಆನಂದ್ ಕುಮಾರ್ ಐಜಿಪಿ ಅವರ ಆದೇಶದ ಮೇರೆಗೆ ಗ್ರಾಮಾಂತರ ಠಾಣೆಯ ವೃತ್ತ ಆರಕ್ಷಕ ಮಂಜು, ಪೂ. ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಸುನೀಲ್, ಮುಖ್ಯಪೇದೆ ನಾಗನಾಯ್ಕ್ ಮೂವರನ್ನ ಅಮಾನತು ಮಾಡಿದರು.
ಮುಂದುವರೆದು ಅಕ್ರಮ ಮರಳು ಸಾಗಾಣಿಕೆಯಲ್ಲಿ ಪಾತ್ರ ಹಾಗೂ ಕರ್ತವ್ಯಲೋಪ ಮೇರೆಗೆ ಚಾಮರಾಜನಗರ ಉಪವಿಭಾಗದ ಡಿವೈಸ್ಪಿ ಮೋಹನ್ ಅವರನ್ನ ಸರ್ಕಾರ ಮಟ್ಟದಲ್ಲಿ ವಿಚಾರಣೆ ನಡೆಸಿ ಅವರನ್ನ ಅಮಾನತು ಮಾಡಲಾಯಿತು.
ಅಪಘಾತ ಸಂದರ್ಭದಲ್ಲಿ ಮೃತನಾದ ನವೀನ್ ಜೇಬಿನಲ್ಲಿದ್ದ ಹಣ ಹಾಗೂ ಕೈಯಲ್ಲಿದ್ದ ಉಂಗುರ ಮಾತ್ರ ಇದೂವರೆಗೂ ಚಾಮರಾಜನಗರ ಜಿಲ್ಲಾ ಪೆÇಲೀಸ್ ಇಲಾಖೆ ವರದಿಯಲ್ಲಿ ಕಾಣಿಸಲೆ ಇಲ್ಲ.
ಅಪಘಾತವಾದಾಗ ಇದ್ದ ಮೂರ್ನಾಲ್ಕು ಜನರ ಪೈಕಿ ಕದ್ದ ಕಳ್ಳ-ಪೆÇಲೀಸ್ ಯಾರೆಂದು ಹುಡುಕುವ ಗೋಜಲಿಗೆ ಇಲಾಖೆ ಹೋಗಲಿಲ್ಲ. ವಿಚಿತ್ರ ಎಂದರೆ ಈ ಪ್ರಕರಣ ಐಜಿಪಿ ವಿಪುಲ್ ಕುಮಾರ್ ಅವರ ವರ್ಗಾವಣೆ ನಂತರ ಅರ್ಧಕ್ಕೆ ನಿಂತಂತೆ ಬಾಸವಾಗಿ ಉಳಿದ ಆರೋಪಿತರೆನ್ನಲಾದ ಪೆÇಲೀಸರು ಬಚಾವಾದರು ಎನ್ನಲಾಗಿದೆ.
ಅಕ್ರಮ ಮರಳಲ್ಲಿ ಪ್ರಮುಖ ಪಾತ್ರರಾದವರ ಹೆಸರು ಕೈ ಬಿಟ್ಟಿದ್ದೇಕೆ?: ಅಕ್ರಮ ಮರಳು ದಂಧೆ ಪ್ರಕರಣದಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಅಂದು (15-05-2020 ರ ಮಧ್ಯರಾತ್ರಿ 12-01 ಗಂಟೆ)ಯಲ್ಲಿ ಅಪಘಾತವಾದಾಗ ಸಂಚಾರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜು ನಾಯಕ ಹಾಗೂ ಅಂದಿನ ಪಟ್ಟಣ ಠಾಣಾ ಇನ್ಸ್ ಪೆಕ್ಟರ್ ನಾಗೇಗೌಡ ಅವರೂ ಪ್ರಕರಣ ತಿರುಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಇಲಾಖಾ ಮಾಹಿತಿಗಳಿಂದಲೆ ಅಂದೆ ಸ್ಪಷ್ಟವಾಗಿದ್ದರೂ ಕ್ರಮ ಕೈಗೊಳ್ಳಲಿಲ್ಲವೇಕೆ?
ಅಷ್ಟೆ ಅಲ್ಲ ಅಕ್ರಮ ಮರಳಿನ ಮೂಲ ಜಾಡು ಸಂತೆಮರಳ್ಳಿ ಠಾಣಾ ವ್ಯಾಪ್ತಿಯ ಕೆಂಪನಪುರ ಗ್ರಾಮದಿಂದ ಹೋಗುತ್ತಿದ್ದದ್ದು ಕೊಳ್ಳೇಗಾಲ ಡಿವೈಸ್ಪಿ ಅವರು ಕೊಟ್ಟ ವರದಿಯಲ್ಲಿ ಸ್ಪಷ್ಟವಾಗಿ ದಾಖಲೆ ಸಮೇತ ದೊರೆತಿದ್ದರೂ ಆ ಠಾಣಾ ವ್ಯಾಪ್ತಿಯ ಸಬ್ ಇನ್ಸ್ ಪೆಕ್ಟರ್ ಮೇಲೆ ಯಾಕೆ ಕ್ರಮಕೈಗೊಳ್ಳಲಿಲ್ಲ?. ಹಾಗೂ ಅಂದಿನ ಪ್ರಮುಖ ಇಬ್ಬರು ಎಸ್.ಬಿ.ವಾಕಿಗಳು ಆರೋಪಿ ನಾಪತ್ತೆಯಾಗಲು ಸಹಕರಿಸಿದ್ದಲ್ಲದೆ ಇಲಾಖೆ ಕರ್ತವ್ಯಲೋಪ ಎಸಗಿದ್ದರೂ ಅವರುಗಳ ಮೇಲೆ ಕ್ರಮ ಜರುಗಿಸಲಿಲ್ಲ ಎಂಬ ಸಾಕಷ್ಟು ಅನುಮಾನಗಳು ಮೂಡಿಬಂದರೂ ಹೊಸದಾಗಿ ಬಂದ ಐಜಿಪಿ ಮದುಕರ್ ಪವಾರ್ ಅವರು ಮಾತ್ರ ಈ ಪ್ರಕರಣ ಮರುವಿಚಾರಣೆ ಮಾಡದೆ ಅರ್ಧಕ್ಕೆ ಕೈ ಬಿಟ್ಟರಾ ಎಂಬ ಯಾವುದೇ ಪ್ರಶ್ನೆಗಳು ಉತ್ತರ ಸಿಗದೇ ನಿಗೂಢವಾಗಿದೆ ಎಂದರೆ ತಪ್ಪಾಗಲಾರದು.