ಮೈಸೂರು ಕೇಂದ್ರ ಕಾರಾಗೃಹದಿಂದ ಕೆಲ ಖೈದಿಗಳು ಪೆರೋಲ್ ಮೇಲೆ ಬಿಡುಗಡೆ

ಮೈಸೂರು: ಕೊರೊನಾ 2ನೇ ಅಲೆ ತೀವ್ರವಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದ 46 ಖೈದಿಗಳನ್ನು 90 ದಿನಗಳ ವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಇವರೊಂದಿಗೆ ಇನ್ನೂ 9 ಮಂದಿ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ.
ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾದ ದಿವ್ಯಶ್ರೀ ಮಾತನಾಡಿ, 46 ಖೈದಿಗಳನ್ನು 90 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 9 ಮಂದಿ ಮಹಿಳೆಯರಿದ್ದು, ಇನ್ನೂ 9 ಮಂದಿ ಪೆರೋಲ್ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ. ನಿಯಮಾವಳಿ ಅನ್ವಯ ಅವರನ್ನೂ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ 500 ಮಂದಿ ಶಿಕ್ಷೆಗೆ ಗುರಿಯಾದವರು ಸೇರಿದಂತೆ ಒಟ್ಟು 800 ಮಂದಿ ಖೈದಿಗಳು ಇದ್ದಾರೆ. ಈ ಪೈಕಿ 46 ಖೈದಿಗಳನ್ನು 90 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಇವರಲ್ಲಿ 9 ಮಂದಿ ಮಹಿಳೆಯರಾಗಿದ್ದಾರೆ. ಇನ್ನು 9 ಮಂದಿ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ ಕೊರೊನಾ ಹಾವಳಿ ಹೆಚ್ಚಾಗುತ್ತಿರುವುದನ್ನು ಮನಗಂಡ ಸುಪ್ರಿಂಕೋರ್ಟ್ ರಾಜ್ಯಗಳ ವಿವಿಧ ಕೇಂದ್ರ, ಜಿಲ್ಲಾ, ತಾಲೂಕು ಕಾರಾಗೃಹಗಳ ಸಜಾ ಬಂಧಿಗಳಿಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು.