ಜನರು ಎಚ್ಚರಿಕೆಯಿಂದ ಇದ್ದು ಕೊರೊನಾದಿಂದ ಪಾರಾಗಬೇಕು -ಸುತ್ತೂರು ಶ್ರೀಗಳು

ಮೈಸೂರು: ಜನರು ಎಚ್ಚರಿಕೆಯಿಂದ ಇದ್ದು ಕೊರೊನಾದಿಂದ ಪಾರಾಗಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ತಿಳಿಸಿದರು.
ನಗರದ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸೋಮವಾರ ಕೊರೊನಾ ಲಸಿಕೆ 2ನೇ ಡೋಸ್ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೂರನೆ ಅಲೆ ಬಂದರೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಅಂತ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಸಿದ್ದತೆ ಮಾಡಿಕೊಳ್ತಿದ್ದೇವೆ. ಸೌಲಭ್ಯ ಹೆಚ್ಚಿಸಿ ಚಿಕಿತ್ಸೆ ನೀಡಬಹುದು ಆದರೆ ನೂರರಷ್ಟು ಆರೋಗ್ಯ ನೀಡಲು ಸಾಧ್ಯವಿಲ್ಲ. ಜನರು ತಮ್ಮ ಎಚ್ಚರಿಕೆಯಲ್ಲಿ ಇರಬೇಕು ಎಂದರು.
ಮೂರನೆ ಅಲೆ ಎದುರಿಸಲು ಸೌಲಭ್ಯಗಳನ್ನ ಹೆಚ್ಚಳ ಮಾಡಲಾಗಿದ್ದು, ಜೆಎಸ್‍ಎಸ್ ಆಸ್ಪತ್ರೆಯಿಂದ ಸರ್ಕಾರಕ್ಕೆ 411 ಬೆಡ್ ನೀಡಲಾಗಿದೆ. ಸರ್ಕಾರ ಮತ್ತೆ 300 ಬೆಡ್ ಕೇಳಿದ್ದರು. ಆದರೆ ಅದಕ್ಕೆ ಬೇಕಾದ ಆಕ್ಸಿಜನ್ ಇಲ್ಲದ ಕಾರಣ ಬೆಡ್ ನೀಡಿಲ್ಲ. ಆಕ್ಸಿಜನ್ ಬಂದ ತಕ್ಷಣ ಬೆಡ್ ನೀಡುತ್ತೇವೆ ಎಂದು ಶ್ರೀಗಳು ಹೇಳಿದರು.
5000ಞಟ ಯೂನಿಟ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಖರೀದಿ ಮಾಡ್ತಿದ್ದೀವಿ. ನಿಮಿಷಕ್ಕೆ 500 ಲೀ ಆಕ್ಸಿಜನ್ ಉತ್ಪಾದಿಸುವ ಜನರೇಟರ್ ಸಹ ಖರೀದಿಗೆ ಸಿದ್ದತೆ ನಡೆದಿದೆ. ಇಷ್ಟು ಆಕ್ಸಿಜನ್ ಸಿಕ್ಕಿದ್ದರೆ ಇನ್ನು 500-600 ಬೆಡ್ ಹೆಚ್ಚಳವಾಗಲಿದೆ ಎಂದರು.