ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ-2021

ಮೈಸೂರು: ಕೋವಿಡ್ -19 ಸಾಂಕ್ರಮಿಕದ ವಿನಾಶಕಾರಿ ಎರಡನೇ ಅಲೆ ಮತ್ತು ಅದರ ಪರಿಣಾಮವಾಗಿ ಜಾರಿಮಾಡಿರುವ ಲಾಕ್ ಡೌನ್ ನಿಂದಾಗಿ ನೈಋತ್ಯ ರೈಲ್ವೆ ಮೈಸೂರು ವಿಭಾಗವು, ಮೈಸೂರು ನಗರದಲ್ಲಿರುವ ಮೈಸೂರು ರೈಲು ವಸ್ತುಸಂಗ್ರಹಾಲಯ ಮತ್ತು ಶಿವಮೊಗ್ಗ ಜಿಲ್ಲೆಯ ಅರಸಾಳುವಿನಲ್ಲಿರುವ ಮಾಲ್ಗುಡಿ ವಸ್ತುಸಂಗ್ರಹಾಲಯಗಳನ್ನು ಸಂದರ್ಶಕರಿಗೆ ಮುಚ್ಚಿದೆ.
ಇದರ ಪರಿಣಾಮ ಮತ್ತಷ್ಟು ಕಲಾಕೃತಿಗಳು ಮತ್ತು ವೈಶಿಷ್ಟ್ಯಗಳನ್ನು ಸೇರಿಸುವ ರೈಲ್ವೆಯ ಯೋಜನೆಗಳ ಕಾರ್ಯ ಕಷ್ಟಕರವಾಗಿದೆ. ಈ ವರ್ಷದ ವಿಷಯವಾದ ‘ದಿ ಫ್ಯೂಚರ್ ಆಫ್ ಮ್ಯೂಸಿಯಮ್ಸ್: ರಿಕವರ್ ಮತ್ತು ರೀ-ಇಮ್ಯಾಜಿನ್’ ಗೆ ಅನುಗುಣವಾಗಿ ಸಂಪನ್ಮೂಲಗಳು ಸೀಮಿತ ಎಂಬ ವಾಸ್ತವದ ಹೊರತಾಗಿಯೂ ಸಹ ಭವಿಷ್ಯದ ದಿಕ್ಕಿನತ್ತ ವೀಕ್ಷಿಸುತ್ತಾ, ಅರ್ಥಪೂರ್ಣವಾದ ಕಾರ್ಯಾಚರಣೆಗಳನ್ನು ನಡೆಸುವತ್ತ ಸದ್ಯದ ಗಮನ ಹರಿಸಲಾಗಿದೆ.
ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವಂತಹ ನವೀನ ಯೋಜನೆಗಳನ್ನು ರೂಪಿಸಲು ವಸ್ತುಸಂಗ್ರಹಾಲಯಗಳ ವ್ಯವಹಾರಗಳನ್ನು ನಿರ್ವಹಿಸಲು ಸೂಚಿತವಾದ ಇಲಾಖೆಗೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಕರೆ ನೀಡಿದ್ದಾರೆ. ಸಂಗ್ರಹಾಲಯಗಳನ್ನು ಅರ್ಥಪೂರ್ಣವಾಗಿ ವಿಶ್ವ ದರ್ಜೆಯನ್ನಾಗಿ ಮಾಡಲು ರೈಲ್ವೆ ವಸ್ತು ಸಂಗ್ರಹಾಲಯಗಳಲ್ಲಿ ಹೆಚ್ಚಿನ ಸಂವಾದಾತ್ಮಕ ಸೌಲಭ್ಯಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಅಡಿಯಲ್ಲಿ ಧನಸಹಾಯ ನೀಡಲು ಸಂಸ್ಥೆಗಳ ಸಹಕಾರವನ್ನು ಅವರು ಕೋರಿದ್ದಾರೆ.
ಈ ಪ್ರದೇಶದ 140 ವರ್ಷಗಳ ರೈಲ್ವೆಯ ಐತಿಹಾಸಿಕ ಪ್ರಯಾಣದ ಹಳೆಯ ವಿಶೇಷಗಳನ್ನು ಸಂರಕ್ಷಿಸುವಲ್ಲಿ ಮೈಸೂರು ರೈಲು ವಸ್ತುಸಂಗ್ರಹಾಲಯವು ಪ್ರಮುಖ ಪಾತ್ರ ವಹಿಸಿದೆ ಎಂದು ಅಗರ್ವಾಲ್ ತಿಳಿಸಿದರು.
ನಾವೆಲ್ಲರೂ ಪ್ರತ್ಯೇಕವಾಗಿ ಮತ್ತು ನಮ್ಮ ಮನೆಗಳಿಗೆ ಸೀಮಿತವಾಗಿರುವಾಗ, ರೈಲ್ವೆ ಈ ಸಂಕಷ್ಟದ ಸಮಯದಲ್ಲಿಯೂ ಸಹ ಜನರ ಕಷ್ಟಗಳನ್ನು ತಗ್ಗಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅಗರ್ವಾಲ್ ಹೇಳಿದರು.
ವ್ಯಕ್ತಿಗಳು, ಮುಖ್ಯವಾಗಿ ವಲಸೆ ಕಾರ್ಮಿಕರಂತಹ ಆರ್ಥಿಕವಾಗಿ ಕೆಳಅಂಚಿನಲ್ಲಿರುವ ಗುಂಪುಗಳ ಜನರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ, ತಾವು ಬಿಕ್ಕಟ್ಟಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದರ ಬಗ್ಗೆ ತಮ್ಮ ಅನುಭವಗಳನ್ನು ಡೈರಿಯಲ್ಲಿ ಅಥವಾ ವೀಡಿಯೊಗಳಲ್ಲಿ ದಾಖಲಿಸುವಂತೆ ಅವರು ಕೇಳಿಕೊಂಡಿದ್ದು ಇದು ನಂತರ ವಸ್ತುಸಂಗ್ರಹಾಲಯದ ನಿರೂಪಣೆಯ ಒಂದು ಭಾಗವಾಗಬಹುದು ಎಂದು ಹೇಳಿದ್ದಾರೆ.
ಸಂಗ್ರಹಾಲಯಗಳ ನಮ್ಮ ಇಟ್ಟಿಗೆ ಮತ್ತು ಗಾರೆಯ ಕಟ್ಟಡಗಳಿಗೆ ಹಿಂತಿರುಗಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಕಾರಣಕ್ಕಾಗಿ, ಜನರು, ಹಿಂದಿನ ರಾಜರ ಕಾಲದ ಮೈಸೂರಿನ ಆಡಳಿತಗಾರರು ಸ್ಥಾಪಿಸಿದ ರೈಲ್ವೆಯ ವಿಕಾಸವನ್ನು ಅರ್ಥಮಾಡಿಕೊಳ್ಳಲು ಮೈಸೂರು ರೈಲು ವಸ್ತುಸಂಗ್ರಹಾಲಯಕ್ಕೆ ‘ವರ್ಚುವೆಲ್’ ಮಾರ್ಗವನ್ನು ತೆಗೆದುಕೊಳ್ಳಬಹುದು ಎಂದು ಅಗರ್ವಾಲ್ ಹೇಳಿದರು.
ಬದಲಾದ ಸನ್ನಿವೇಶದಲ್ಲಿ ನಾವು ನಮ್ಮ ದೀರ್ಘ ಮತ್ತು ಅಲ್ಪಾವಧಿಯ ಕಾರ್ಯತಂತ್ರಗಳನ್ನು ಪುನರ್ವಿಮರ್ಶಿಸುತ್ತಿದ್ದೇವೆ ಎಂದು ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಡಾ. ಮಂಜುನಾಥ್ ಕನಮಡಿ ತಿಳಿಸಿದರು.