ಮೈಸೂರು: ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ವಿಶ್ವನಾಥ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ವಿಕೇಂದ್ರೀಕರಣ ಆಗಿದೆ. ಇದೆಲ್ಲವು ಪಸೆರ್ಂಟೆಂಜ್‍ಗಾಗಿ ಮಾಡಿಕೊಂಡಿರೋದು ಎಂದು ವಿಶ್ವನಾಥ್ ದೂರಿದರು.
ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡೋ ಪವರ್ ಇಲ್ಲ. ಜಿಲ್ಲಾ ಮಂತ್ರಿಗೂ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ವಿಜಯೇಂದ್ರ ಹಾಗೂ ಸರ್ಕಾರದ ವಿರುದ್ಧ ವಿಶ್ವನಾಥ್ ಹರಿಹಾಯ್ದರು.
ಪಿಎಂ ಅವರೇ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರತಿ ಜಿಲ್ಲೆಗೂ ಹಿರಿಯರು ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಿ. ಅವರೇ ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ ಎಲ್ಲವನ್ನೂ ಅವರಿಗೆ ಮಾಡಲು ನಿರ್ದೇಶಿಸಿ ಎಂದರು.
ಮೈಸೂರಿನಲ್ಲಿ ಒಂದು ದಿನವೂ ಡಿಸಿ ಹಳ್ಳಿಗಳ ಕಡೆ ಹೋಗಿಲ್ಲ. ಟಾಸ್ಕ್ ಪೆÇೀರ್ಸ್ ನವರೂ ಹಳ್ಳಿಗಳಿಗೆ ಹೋಗುತ್ತಿಲ್ಲ. ಯಾವ ಜಿಲ್ಲಾಧಿಕಾರಿ ಹಳ್ಳಿಗಳ ಕಡೆ ಹೋಗಿದ್ದಾರೆ ಹೇಳಿ? ಎಂದು ವಿಶ್ವನಾಥ್ ಪ್ರಶ್ನಿಸಿದರು.
ಕೊರೊನಾ ನಿರ್ವಹಣೆಗೆ ಅವರಿಗೆ 100 ಕೋಟಿ ನೀಡಿ. ಸಂಪೂರ್ಣವಾದ ಫೈನಾನ್ಸ್ ಅಧಿಕಾರ ಕೊಡಿ. ಒಂದು ಸಾವು ಆಗದಂತೆ ಅವರಿಗೆ ಎಚ್ಚರಿಕೆ ನೀಡಿ. ಅವರಿಗೆ ಪರಮಾಧಿಕಾರದ ಜೊತೆಗೆ ಆಡಳಿತದಲ್ಲಿ ಫ್ರೀ ಹ್ಯಾಂಡ್ ಕೊಡಿ. ಇದರಿಂದ ಕೊರೊನಾ ಕಂಟ್ರೋಲ್ ಮಾಡುವಂತೆ ಸೂಚಿಸಿ ಎಂದರು.
ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನೆ ಕೂತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಹಳ್ಳಿಯಲ್ಲಿ ಸಾಯುತ್ತಿರುವವರು ಶ್ರಮಿಕರು. ಅಹಿಂದ ವರ್ಗದವರೇ ಹೆಚ್ಚು ಎಂದು ಹೇಳಿದ ವಿಶ್ವನಾಥ್, ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ಕೊಡಿ. ಹಣ ಕೊಟ್ಟು ಇನ್ನೂ 15 ದಿನ ಲಾಕ್ ಡೌನ್ ಮಾಡಿ ಎಂದರು.
ಮಾಂಸದ ಅಂಗಡಿಗಳನ್ನು ಮುಚ್ಚಿ. ಮಾಂಸದ ಅಂಗಡಿ ಮುಂದೆ ದಿನವೂ ಜನಜಾತ್ರೆ ಇರುತ್ತೆ. ಒಂದು ತಿಂಗಳು ಮಾಂಸ ತಿನ್ನದೇ ಇದ್ದರೆ ಸತ್ತು ಹೋಗುತ್ತಾರಾ? ಎಂದು ಅವರು ಪ್ರಶ್ನಿಸಿದರು.
ದಿನವೂ ದಿನಸಿ, ತರಕಾರಿ ತರಬೇಕಾ? ವಾರಕ್ಕೆ ಒಂದು ದಿನ ತೆಗೆಯಿರಿ ಎಂದು ಅವರು ಹೇಳಿದರು.