ಒಂದು ಕೋವಿಡ್ ಕೇರ್ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೆ ಎಲ್ಲಾ ಕೇಂದ್ರ ಮುಚ್ಚುವುದು ಎಷ್ಟು ಸರಿ -ಶಾಸಕ ಸಾ.ರಾ.ಮಹೇಶ್ ಪ್ರಶ್ನೆ

ಮೈಸೂರು: ಒಂದು ಕೋವಿಡ್ ಕೇರ್ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೆ ಎಲ್ಲಾ ಕೇಂದ್ರ ಮುಚ್ಚುವುದು ಎಷ್ಟು ಸರಿ ಎಂದು ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಶಾಸಕರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕೋವಿಡ್ ಕೇರ್ ಸೆಂಟರ್ ಗೆ ಶಾಸಕ ರಾಮದಾಸ್ ಹೋದಾಗ ಒಂದೆರಡಲ್ಲಿ ಅವ್ಯವಸ್ಥೆ ಇರಬಹುದು. ಅವರು ಹೇಗೆ ಇಡೀ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಅನ್ನು ಬಂದ್ ಮಾಡಿಸುತ್ತಾರೆ? ರಾಮದಾಸ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲದ ವಿಚಾರದಲ್ಲಿ ನಿರ್ಣಯ ಕೈಗೊಂಡಿದ್ದಾರೆಂದರು.
ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್, ರಾಮದಾಸ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜಿಸಿದ್ದರಾ? ಒಬ್ಬ ಶಾಸಕರ ಮಾತು ಕೇಳಿ ಜಿಲ್ಲಾಡಳಿತ ಹೇಗೆ ಇಡೀ ಜಿಲ್ಲೆಗೆ ಆದೇಶ ಅನ್ವಯ ಮಾಡಿತು ಎಂದು ಪ್ರಶ್ನಿಸಿದರು.
ಯಾರು ವಸೂಲಿ ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಎಲ್ಲರಿಗೂ ಒಂದೆ ತರ ಆಗಿಬಿಟ್ಟರೆ ರೋಗಿಗಳ ಪರಿಸ್ಥಿತಿ ಏನು? ಅದಕ್ಕೆ ಪತ್ಯೇಕವಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೀರಾ? ಎಂದರು.
ಯಾವುದು ಕಾನೂನು ಬಾಹಿರವಾಗಿದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ, ಇದು ಸಮಯವಲ್ಲ, ಒಂದು ಜೀವದ ಪ್ರಶ್ನೆ. ಶಾಸಕರ ಅಧ್ಯಕ್ಷತೆಯಲ್ಲಿ ನಿರ್ಧಾರ ಹೇಗಾಯಿತು ಎಂದು ಸಾ. ರಾ. ಮಹೇಶ್ ಪ್ರಶ್ನಿಸಿದರು.