ಕೋವಿಡ್ ರೋಗಿಗಳಿಗೆ ಗಮನ ಕೊಡೊವ್ರಾದರೆ ಸಾಮಾನ್ಯ ರೋಗಿಗಳ ಕಥೆಯೇನು?

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲಾಸ್ಪತ್ರೆ ಪಟ್ಟಣದ ಒಳಗೆ ಇದೆ. ಸಾಮಾನ್ಯವಾಗಿ ರೋಗಿಗಳು ಹೆಚ್ಚಾದರೆ ಆ ಪರಿಸ್ಥಿತಿ ವೈದ್ಯರಿಗೆ ದಾದಿಯರಿಗೆ ಹೆಚ್ಚು ಅಂದ್ರೆ ಮೃತರ ಸಂಬಂಧಿಕರು ಹೆಣ ತಂದು ಬೀದಿಗಿಟ್ಟು ಪ್ರತಿಭಟನೆ ಮಾಡಿದಾಗ ಆ ರಸ್ತೆಯ ಸ್ಥಿತಿ ಪೆÇಲೀಸರಿಗμÉ್ಟ ಗೊತ್ತಾಗೋದು. ಆವಾಗ ಜನ ರಸ್ತೆ ಸಂಚಾರ ದಟ್ಟಣೆ ಯಾಕಾಯ್ತ್ ಅಂತ ಯೋಚನೆ ಮಾಡಿ ನಿಲ್ತಾರೆ.
ವಿಚಾರ ಇದಲ್ಲ..ಆದರೂ ಇದು ಒಂದು ಕಡೆಯಾದರೆ ಈ ಕೋವಿಡ್ ಅವಧಿಯಲ್ಲಿ ಸಾಮಾನ್ಯ ಖಾಯಿಲೆ ಚಿಕಿತ್ಸೆಗೂ ರೋಗಿಗಳು ಜಿಲ್ಲಾಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ಹಳೆಕಟ್ಟಡ ಕೋವಿಡ್ ಪೀಡಿತರನ್ನೊಳಗೊಂಡ ಆಸ್ಪತ್ರೆಯಾದರೂ ಇನ್ನ ಕೆಲವರಿಗೆ ಹೊಸ ಕಟ್ಟಡದ ಎರಡನೆ ಮಹಡಿಯಲ್ಲೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಡರೋಗಿಗಳಿರಲಿ ಶ್ರೀಮಂತನೂ ಸಾಮಾನ್ಯ ಖಾಯಿಲೆಯೆ ಚಿಕಿತ್ಸೆಗೂ ಕೋವಿಡ್ ಚಿಕಿತ್ಸೆ ನೀಡುತ್ತಿರೋ ಈ ಜಿಲ್ಲಾಸ್ಪತ್ರೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನ ಬಡವರು ಕೈ ಕಾಲು ಮುರಿದುಕೊಂಡರು ಖಾಸಗಿ ಆಸ್ಪತ್ರೆಗೆ ಹೆಚ್ಚು ಹಣ ಹೊಂದಿಸಲು ಸಾಧ್ಯವಾಗದೆ ಮನೆಯಲ್ಲೆ ನರಕಯಾತನೆ ಅನುಭವಿಸಿರೊ ಪ್ರಕರಣಗಳೂ ಇದೆ.
ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದಲ್ಲಿ ಉಳಿದಂತೆ ಬೇರೆ ಬೇರೆ ರೋಗಿಗಳು ಹಾಗೂ 40ಕ್ಕೂ ಹೆಚ್ಚು ಡಯಾಲಿಸಿಸ್ ರೋಗಿಗಳು ಇದ್ದು ಇವರೂ ಕೂಡ ಭಯದ ಆತಂಕದಲ್ಲಿದ್ದಾರೆ ಎಂದರೆ ಸಹಜವಾಗಿ ತಪ್ಪಾಗಲಾರದು.
ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಾರಂಭವಾದಾಗಿನಿಂದ ಪ್ರಾಣದ ಹಂಗನ್ನೆ ತೊರೆದು ಪೆÇಲೀಸರು ಕಾಯಕ ನಿರ್ವಹಿಸಬೇಕಾಗಿದೆ. ಸಂಚಾರ ಠಾಣೆಯ ಪೆÇಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ದಟ್ಟಣೆ ನಿಯಂತ್ರಿಸೊದμÉ್ಟ ಅಲ್ಲ ಉಳಿದ ಜನಸಾಮಾನ್ಯರ ಪ್ರಾಣವನ್ನ ಪರೋಕ್ಷವಾಗಿ ಕಾಪಾಡುತ್ತಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಊರ ಹೊರಗೆ ಇರುವ ಮೆಡಿಕಲ್ ಕಾಲೇಜು ಸಮೀಪದ ಆಸ್ಪತ್ರೆ ಬೇಗ ಸಿದ್ದಗೊಳಿಸಿ ಈ ಎಲ್ಲ ಕೋವಿಡ್ ರೋಗಿಗಳನ್ನ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕಾಗಿದೆ.
ಆವಾಗ ಸಂಚಾರ ದಟ್ಟಣೆ ಜೊತೆಗೆ ಇತರ ಸಾಮಾನ್ಯ ರೋಗಿಗಳು ಭಯಮುಕ್ತದಿಂದ ಚಿಕಿತ್ಸೆಗೆ ಬರುವಲ್ಲಿ ಸಹಕಾರಿಯಾಗಲಿದೆ ಎಂಬುದು ನಮ್ಮ ಆಶಯ.