ಪತ್ರಿಕೆ ಹಂಚುವ ಯುವಕರಿಗೆ ಕೊರೊನಾ ಕವಚ 1 ಲಕ್ಷ ರೂ. ಬಾಂಡ್ ವಿತರಣೆ

ಮೈಸೂರು: ಮನೆ ಮನೆಗೆ ಪತ್ರಿಕೆ ಹಂಚುವ ಯುವಕರಿಗೆ ಕೊರೊನಾ ಕವಚ ಒಂದು ಲಕ್ಷರೂ ಗಳ ಬಾಂಡ್ ನ್ನು ಶನಿವಾರ ನಗರದಲ್ಲಿ ವಿತರಣೆ ಮಾಡಲಾಯಿತು.
ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು ಅವರ ಹುಟ್ಟು ಹಬ್ಬ ಅಂಗವಾಗಿ ಶ್ರಮಿಕವರ್ಗ, ಅಸಂಘಟಿತ ವಲಯ, ಸ್ವಾಭಿಮಾನಿ ಕಾಯಕವಾದ ಹಾಗೂ ಕೋವಿಡ್ 2.0 ಸಂಧರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆ ಹಂಚುವ 20 ಮಂದಿ ಯುವಕರಿಗೆ ಉಚಿತವಾಗಿ ಕೊರೊನಾ ಕವಚದ 1 ಲಕ್ಷ ರೂ.ಗಳ ಬಾಂಡ್ ವಿತರಣೆ ಮಾಡಲಾಯಿತು.
ಪತ್ರಿಕೆ ಹಂಚುವ ಯುವಕರು ದಿನ ನಿತ್ಯ ಬೆಳಗ್ಗೆ ಮನೆ ಮನೆ ಗಳಿಗೆ ತೆರಳಿ ವಿಶ್ವದ ಎಲ್ಲ ಸುದ್ದಿಗಳನ್ನು ನಾಗರೀಕರಿಗೆ ಮುಟ್ಟಿಸುತ್ತಾರೆ. ಇವರುಗಳಿಗೆ ಕೋವಿಡ್ ರೋಗ ತಗಲಿದ ಸಂಧರ್ಭದಲ್ಲಿ ಅವರುಗಳಿಗೆ ಯಾವುದೇ ವಿಮೆ, ಭದ್ರತೆ, ಪ್ರಾವಿಡೆಂಟ್ ಫಂಡ್, ರಾಜ್ಯ ಕಾರ್ಮಿಕ ವಿಮೆ ಯಾವುದು ಇಲ್ಲ. ಈಗ ಇವರಿಗೆ ನೀಡಲಾಗಿರುವ ಕೋವಿಡ್ ಕವಚ ವಿಮೆಯಿಂದ ಸುಮಾರು 5 ಲಕ್ಷದವರೆಗೂ ಸವಲತ್ತುಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಯಲ್ಲಿ ಪಡೆಯಬಹುದು ಎಂದು ಜೋಗಿ ಮಂಗು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಯುವ ಮೋರ್ಚಾ ಉಪಾಧ್ಯಕ್ಷ ನಿಶಾಂತ್, ಹಿಂದುಳಿದ ವರ್ಗಗಳ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ್, ಆಟೋ ಮಾಲೀಕರ ಸಂಘದ ಅಧ್ಯಕ್ಷ ನಂಜುಂಡ ಸ್ವಾಮಿ, ಸತ್ಯ, ಪ್ರಶಾಂತ್, ಗಿರೀಶ್, ರಾಜೇಶ್ ಇದ್ದರು.