ಚಾಮರಾಜನಗರ: ಕಳೆದ 29 ವರ್ಷಗಳಿಂದ ಕಾಡುಗಳ್ಳ ವೀರಪ್ಪನ್ ಹಾರಿಸಿದ ಮೂರು ಗುಂಡುಗಳನ್ನ ತಲೆಯಲ್ಲೇ ಇಟ್ಟುಕೊಂಡಿದ್ದ ಚಾಮರಾಜನಗರದ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜ ನಾಯಕ್ ಮಂಗಳವಾರ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.
1992ರ ಆ. 14ರಂದು ಎಸ್‍ಪಿ ಹರಿಕೃಷ್ಣ ಹಾಗೂ ಎಸ್‍ಐ ಶಕೀಲ್ ಅಹಮದ್ ವೀರಪ್ಪನ್‍ನ್ನು ಹುಟ್ಟಡಗಿಸಲು ಕಾರ್ಯಾಚರಣೆ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಸಿದ್ದರಾಜ ನಾಯಕ್ ಸಹ ಪಾಲ್ಗೊಂಡಿದ್ದರು. ಅಂದಿನ ಕಾರ್ಯಾಚರಣೆಯಲ್ಲಿ ಎಸ್‍ಪಿ ಹರಿಕೃಷ್ಣ, ಎಸ್‍ಐ ಶಕೀಲ್ ಅಹಮದ್ ಸೇರಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಸಿದ್ದರಾಜ ನಾಯಕ್ ಅವರ ದೇಹಕ್ಕೆ ಒಟ್ಟು 7 ಗುಂಡುಗಳು ಹೊಕ್ಕಿದ್ದರೂ ಪವಾಡದೃಶವಾಗಿ ಬದುಕುಳಿದಿದ್ದರು.
ಸಿದ್ದರಾಜ ನಾಯಕ್ ಕಳೆದ ವರ್ಷ ಕೊರೊನಾ ಸಮಯದಲ್ಲಿ 75 ದಿನಗಳ ಕಾಲ ರಜೆ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇಂದು ಸಿದ್ದರಾಜ ನಾಯಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಾಮರಾಜನಗರ ಪೆÇಲೀಸರು ಸಂತಾಪ ವ್ಯಕ್ತಪಡಿಸಿದ್ದಾರೆ.