ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮಾಧ್ಯಮಗಳ ಪ್ರಚಾರ ಭರಾಟೆಯಲ್ಲಿ ಚಾಮರಾಜನಗರ ಜಿಲ್ಲಾ ಪೆÇಲೀಸರು ಕೊರೊನಾ ನಿಯಮಗಳನ್ನ ಗಾಳಿಗೆ ತೂರಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಅಕ್ರಮ ಮದ್ಯ ಜಪ್ತಿ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಗ್ರಾಮಾಂತರ ಠಾಣಾ ಪೆÇಲೀಸರು ಮಾಧ್ಯಮ ಪ್ರಚಾರಕ್ಕಾಗಿ ಕೋವಿಡ್ ನಿಯಮಗಳನ್ನ ಗಾಳಿ ತೂರಿದ್ದಾರೆ.
ಬಹುತೇಕ ಪೆÇೀಲೀಸರು ಮಾಸ್ಕ್ ಹಾಕುವುದನ್ನ ಮರೆತಿದ್ದರೆ ಇನ್ನ ಕೆಲವರು ಮೂಗಿನ ಕೆಳಗೆ ಮಾಸ್ಕ್ ಧರಿಸಿದ್ದಾರೆ. ಇದು ಒಂದೆಡೆಯಾದರೆ, ಸಾಮಾಜಿಕ ಅಂತರವಂತು ಮತ್ತೊಂದೆಡೆ ಮಾಯವಾಗಿದೆ. ಒಟ್ಟಾರೆ ಕೋವಿಡ್ ನಿಯಮದ ಅರಿವು ಮೂಡಿಸಬೇಕಾಗಿದ್ದ ಪೆÇಲೀಸರೆ ಕೊರೊನಾ ನಿಯಮ ಉಲ್ಲಂಘಿಸಿದ್ದು ಚಾಮರಾಜನಗರ ಉಪವಿಭಾಗದ ಡಿವೈಸ್ಪಿ ಸೇರಿದಂತೆ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಗಳು ಚಿತ್ರದಲ್ಲಿ ಇರೋದು ಗಮನಾರ್ಹವಾಗಿದೆ.
ಜಿಲ್ಲಾ ಎಸ್ಪಿಗಾಗಲಿ, ಐಜಿಪಿ ಅವರಿಗಾಗಲಿ ಇದು ಇನ್ನು ಕಾಣದಿರುವುದು ವಿಪರ್ಯಾಸವೆಂದರೆ ತಪ್ಪಾಗಲಾರದು.
ಗುಂಪಿನಲ್ಲಿರೋ ಓರ್ವ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇದ್ದರೆ ಸಾಮೂಹಿಕವಾಗಿ ಹರಡೊಲ್ವ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.