ಮಹಿಳೆಯರಿಗಾಗಿಯೇ ಲಸಿಕೆ ಪಡೆಯಲು ವಿಶೇಷ ಪಿಂಕ್ ಬೂತ್

ಚಾಮರಾಜನಗರ: ಕೋವಿಡ್ ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಬಿರುಸಿನಿಂದ ಕೈಗೊಂಡಿದ್ದು ಜೂ. 14ರಂದು ಮಹಿಳೆಯರಿಗಾಗಿಯೇ ಕೋವಿಡ್ ಲಸಿಕೆ ಪಡೆಯಲು ವಿಶೇಷವಾಗಿ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪಿಂಕ್ ಬೂತ್ ಗಳನ್ನು ತೆರೆಯಲಾಗಿದೆ.
ಚಾಮರಾಜನಗರದ ಜಿಲ್ಲಾ ಆಸ್ಪತ್ರೆ, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕು ಆಸ್ಪತ್ರೆಯ ಲಸಿಕಾ ಕೇಂದ್ರ, ಕೊಳ್ಳೇಗಾಲದ ವಾಸವಿ ಮಹಲ್ ನಲ್ಲಿ ಮಹಿಳೆಯರಿಗಾಗಿಯೇ ಕೋವಿಡ್ ಲಸಿಕೆ ಪಡೆಯಲು ವಿಶೇಷ ಕೋವಿಡ್ ಲಸಿಕಾ ಪಿಂಕ್ ಬೂತ್ ತೆರೆಯಲಾಗಿದೆ.
18 ವರ್ಷ ಮೇಲ್ಪಟ್ಟವರು ಹಾಗೂ 45 ಮೇಲ್ಪಟ್ಟ ಎಲ್ಲ ಮಹಿಳೆಯರು ಹಾಜರಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.