ಪ್ರಾಣಿಗಳೂ ವಾಕಿಂಗ್ ಬರ್ತಾವೆ ಅಂದ್ರೆ ಪರದೇಶಿ ಆಯ್ತಾ ಪೊಲೀಸ್ ಕವಾಯತು ಮೈದಾನ!

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕವಾಯತು ಮೈದಾನ ಅದೂ ಪೊಲೀಸ್ ಇಲಾಖೆಯದ್ದು ಅಂದರೆ ಸಾಕು ಕಟ್ಟುನಿಟ್ಟು ಯಾರೂ ಕೂಡ ಅನಧಿಕೃತ ವ್ಯಕ್ತಿಗಳು ಬರುವ ಹಾಗಿಲ್ಲ.

ಅಷ್ಟೆ ಯಾಕೆ ಬೇರೆಯವರಿಂದ ದುರುಪಯೋಗ ಕೂಡ ಆಗೋಂಗಿಲ್ಲ. ಆದರೆ ಚಾಮರಾಜನಗರ ಜಿಲ್ಲಾ ಪೊಲೀಸ್ ಕವಾಯತು ಮೈದಾನ ಮಾತ್ರ ಇದರಿಂದ ಹೊರತಾಗಿದೆ.

ಚಾಮರಾಜನಗರ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಅದೆಷ್ಟೊ ಎಸ್ಪಿ ಅವರುಗಳು ಕಛೇರಿ, ಮೈದಾನ, ಕವಾಯತು ಮೈದಾನಗಳು ಕಟ್ಟುನಿಟ್ಟಾಗಿ ಯಾರ ಪ್ರವೇಶವೂ ಇಲ್ಲದೆ ಇದ್ದರೂ ಅದೆಲ್ಲದಕ್ಕೂ ಇಲಾಖಾ ನಿಯಮಗಳನ್ನೆ ರೂಪಿಸಿ ಜಾಗರೂಕವಾಗಿ ನೋಡಿಕೊಂಡಿದ್ದುಂಟು.

ಆದರೆ ಚಾಮರಾಜನಗರ ಕವಾಯತು ಮೈದಾನ ಇತ್ತೀಚೆಗೆ ಸಾರ್ವಜನಿಕರ ಮೈದಾನವಾಗಿದೆ ಎಂದರೆ ತಪ್ಪಾಗಲಾರದು.

ಪೊಲೀಸ್ ಇಲಾಖೆಯ ಕವಾಯತು ಮೈದಾನದಲ್ಲಿ ಪಥಸಂಚಲನ, ಇಲಾಖೆಯ ಕ್ರೀಡಾಕೂಟಗಳು ಹಾಗೂ ಇತರೆ ಇಲಾಖೆ ಸಂಬಂಧಿಸಿದ್ದಾದರೂ ಉಳಿದಂತೆ ಒಳಗಡೆಗೆ ನಿರ್ಬಂಧ ಹೇರಲಾಗಿರುತ್ತದೆ. ಸಾರ್ವಜನಿಕರಿಗಂತು ನಿಷೇದ ಕಡ್ಡಾಯವಾಗಿರುತ್ತದೆ.

ಕವಾಯತು ಮೈದಾನ ಕಳೆದ ವರ್ಷ ಕ್ರೀಡಾಸ್ಪರ್ಧೆ ಏರ್ಪಡಿಸಿದ್ದ ಸಂಧರ್ಭದಲ್ಲಿ ಅಂದಿನ ಐಜಿಪಿ ವಿಪುಲ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಚಾಮಾರಜನಗರದ ಎಸ್ಪಿ ಅವರಿಗೆ ನೀಡಿದ್ದರು.

ತದನಂತರ ಅವರ ವರ್ಗಾವಣೆ ಹಾಗೂ ಎಸ್ಪಿ ಅವರ ವರ್ಗಾವಣೆ ನಂತರ ಈ ಆದೇಶಗಳು ಮಾಯವಾದವು.

ಜನರಿರಲಿ ದನಗಳೆ ಬರಲಾರಂಭಿಸಿದೆ
ಇದೀಗ ಜನರಿರಲಿ ದನಗಳೆ ಬರಲಾರಂಭಿಸಿದೆ. ಅಲ್ಲಿಗೆ ಇಲಾಖೆಯವರ ಕೆಲಸ ಮರೆತು ಕವಾಯತು ಮೈದಾನ ಕ್ರೀಡಾ ಮೈದಾನದ ತರಹ ಮುಂಜಾನೆ ಸಾರ್ವಜನಿಕರಗಿದ್ದಂತಾಗಿದೆ.

ಚಾಮರಾಜನಗರ ಪೊಲೀಸ್ ಕವಾಯತು ಮೈದಾನದಲ್ಲಿ ಮೊದ ಮೊದಲು ಪೊಲೀಸ್ ಇಲಾಖೆ ಸಿಬ್ಬಂದಿಗಳು ವಾಕ್ ಮಾಡಲಾರಂಬಭಿಸಿದರೆ ನಂತರ ಸಾರ್ವಜನಿಕರು ಬರಲಾರಂಬಭಿಸಿದರು. ಇದೀಗ ಹೊಸದಾಗಿ ದನಗಳು, ಕುದುರೆಗಳು ಕೂಡ ವಾಕಿಂಗ್ ಬರಲಾರಂಭಿಸಿದೆ.