ಆ. 14ರಂದು ಮೆಗಾ ಲೋಕಾ ಅದಾಲತ್ -ಜಿ.ನ್ಯಾ.ಸದಾಶಿವ ಎಸ್.ಸುಲ್ತಾನಪುರಿ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: 7806 ಪ್ರಕರಣ ಈ ಸಲದ ಮೆಗಾ ಲೋಕ ಅದಾಲತ್ ಅಲ್ಲಿ ರಾಜೀಯೋಗ್ಯ ಪ್ರಕರಣವಾಗಿದ್ದು ಆ ಪೈಕಿ ಸುಮಾರು 4 ಸಾವಿರ ಪ್ರಕರಣ ಇತ್ಯರ್ಥವಾಗುವ ನಿರೀಕ್ಷೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ಹೇಳಿದರು.

ಅವರು ಚಾಮರಾಜನಗರದ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ 13 ನ್ಯಾಯಾಲಯದಲ್ಲಿ 20148 ಪ್ರಕರಣ ಬಾಕಿ ಇದ್ದು ಅವುಗಳಲ್ಲಿ 7806 ರಾಜೀ ಯೋಗ್ಯ ಪ್ರಕರಣಗಳಾಗಿದೆ. ಕಳೆದ ಮಾರ್ಚ್ 27ರಂದು ನಡೆದ ಲೊಕ ಅದಾಲತ್ ಅಲ್ಲಿ 2846 + 425 (ಪಿಎಲ್ಸಿ) ಒಟ್ಟು 3271 ಪ್ರಕರಣ ರಾಜೀ ಸಂದಾನದ ಮೂಲಕ ಇತ್ಯರ್ಥವಾಗಿತ್ತು ಎಂದು ತಿಳಿಸಿದರು.

ಮೊ.ವಾ.ಅಪಘಾತ ಕಾಯ್ದೆ ಸಂಬಂದ 694 ಪ್ರಕರಣ,ಚೆಕ್ ಬೌನ್ಸ್ 958 ಪ್ರಕರಣ, ಹಣವಸೂಲಿ ದಾವೆ 665, ಎಲ್ ಎಸಿ 104 ಪ್ರಕರಣ, ಬಾಕಿ ಇರೊ ಇಂಜಕ್ಷನ್, ಪಾಲು ವ್ಯಾಜ್ಯ ಸ್ವಾದೀನ ಕೋರಿ ದಾವೆ 3174 ಪ್ರಕರಣ, ಜೀವನಾಂಶ ಕೌ.ದೌ.ಕಾಯ್ದೆ ಇತರೆ ಸೇರಿ 998 ಪ್ರಕರಣ, ನೌಕರ ಪರಿಹಾರ ನಷ್ಟ ಕಾರ್ಮಿಕ ವಿವಾದ ಎಮ್ಎಮ್ಆರ್ಡಿ 109 ಪ್ರಕರಣ, ದಾಂಪತ್ಯ ವಿವಾಹ ಸಂಬಂದಿತ 71, ಬೇರೆ ಸ್ವರೂಪದ ವಿವಾದ 650, ಇತರ ಕ್ರಿಮಿನಲ್ ಪ್ರಕರಣ 383 ಸೇರಿ ಒಟ್ಟು 7806 ಪ್ರಕರಣ ರಾಜೀಯೋಗ್ಯ ಪ್ರಕರಣ ಎಂದು ಗುರ್ತಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾ.ಸೇ.ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್, ವಕೀಲ ಸಂಘದ ಅಧ್ಯಕ್ಷ ಇಂದುಶೇಖರ್, ಕಾರ್ಯದರ್ಶಿ ಮಂಜು ಹಾಜರಿದ್ದರು.