ಠಾಣೆ ಆವರಣದಲ್ಲಿ ಪೊಲೀಸರೊಂದಿಗೆ ಹುಟ್ಟುಹಬ್ಬ ಆಚರಣೆ: ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ!

ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ

ಚಾಮರಾಜನಗರ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ರಾಜಾರೋಷವಾಗಿ ಕೇಕ್ ಕತ್ತರಿಸಿ ಪೊಲೀಸರ ಸಮ್ಮುಖದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ಕೋಟೆ ತಾಲ್ಲೋಕಿನ ಸರಗೂರು ಠಾಣೆಯಲ್ಲಿ ನಡೆದಿದ್ದ ಬೆನ್ನ ಹಿಂದೆಯೆ? ಚಾಮರಾಜನಗರದರಲ್ಲೂ ಇಂತಹದ್ದೆ ವಿಲಕ್ಷಣ ಘಟನೆಯೊಂದು ನಡೆದುದರ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. 

ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು ಎಂಬ ಆದೇಶವಿದ್ದರೂ ಕ್ಷೇತ್ರದ ಸರಗೂರು ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಖಾಸಗಿ ವ್ಯಕ್ತಿಯೊಬ್ಬ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿ ಅಲ್ಲಿನ ಎಎಸ್ಐ, ಕಾನ್ಸ್ ಟೇಬಲ್ ವರ್ಗಾವಣೆ ಮಾಡಿ ಅಲ್ಲಿನ ಎಸ್ಪಿ ಅವರು ದಕ್ಷತೆ ಮೆರೆದಿದ್ದರು.‌

 ಚಾಮರಾಜನಗರ ಸಂಚಾರಿ ಠಾಣೆಯ ಆವರಣದಲ್ಲೆ ಖಾಸಗಿ ವ್ಯಕ್ತಿಯೊಬ್ಬ. ಪೊಲೀಸರಿಬ್ಬರ ಸಮಕ್ಷಮದಲ್ಲೆ

ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಖಾಸಗಿ ವ್ಯಕ್ತಿ ಪೊಲೀಸ್ ಠಾಣೆ ಒಳಗೆ ಅಥವಾ ಹೊರಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ ಎಂದರೆ ಈತನಿಂದ ಇವರಿಗೆ ಎಷ್ಟು ಸಹಕಾರ ಮುಖ್ಯವಾಗಿದೆ ಎಂಬುದು ತಿಳಿಯುತ್ತದೆ ಎಂಬುದು ಸರಗೂರಲ್ಲೂ ಚರ್ಚೆಗೆ ಗ್ರಾಸವಾಗಿತ್ತು.

ಚಾಮರಾಜನಗರದಲ್ಲೂ ಅದೇ ತರಹ ಕೆಲವರ ಜಪ್ತಿ ಮಾಡಿದ ವಾಹನಗಳನ್ನ ಕೆಲವರ ಪ್ರಬಾವಕ್ಕೆ ಮಣಿದು ಬಿಟ್ಟು ಕಳುಹಿಸಿದ ಆರೋಪವೂ ಕೂಡ ಇದೆ. 

ಡಿವೈಎಸ್ಪಿ ಪ್ರಿಯದರ್ಶಿನಿ ಶ್ಯಾಣಿಕೊಪ್ಪ ಅವರ ಸಕ್ಷಮ ಪ್ರಾದಧಿಕಾರದ ಮುಂದೆ ಪಿಎಸ್ಐ ನಂದೀಶ್ ಅವರನ್ನ ನಿಗದಿತ ದಿನದ ಸಿಸಿ ಪುಟೇಜ್ ಕೊಡಲು ಮಾಹಿತಿ ಹಕ್ಕು ಅರ್ಜಿದಾರ ಅರ್ಜಿ ಸಲ್ಲಿಸಿದ್ದರೆ ಠಾಣೆಗೆ ವಿಕ್ಟಿಮ್, ಅಕ್ಯೂಸ್ಡ್ ಬರುತ್ತಾರೆ ಇದರಿಂದ ತೊಂದರೆಯಾಗುತ್ತದೆ ಎಂದು ಹಿರಿಯ ಅದಧಿಕಾರಿಗಳಿಗೆ ಸಬೂಬು ಹೇಳುವ ಮೂಲಕ ತಮ್ಮ ಕರ್ತವ್ಯದ ಹಿಂದೆ ಇರೊ ರಹಸ್ಯ ಮುಚ್ಚಿಟ್ಟಿದ್ದಾರೆ.

ಚಾಮರಾಜನಗರ ಸಂಚಾರಿ ಠಾಣೆಯೊಳಗೆ ಕೇಕ್ ಕತ್ತರಿಸಿರಬಹುದಾದ ಅನುಮಾನವಿದ್ದರೂ ಎಲ್ಲವು ಈ ಠಾಣೆಯ ಸಿಸಿ ಟಿವಿಯಲ್ಲೆ ರೆಲಕಾರ್ಡ್ ಆಗಿದ್ದು ಕೊಟ್ಟರೆ ಎಲ್ಲಿ ಅಪಾಯಕ್ಕೆ ಸಿಲುಕಬಹಹುದೆಂದು ತಪ್ಪಿಸಿಕೊಂಡಿದ್ದಾರೆ.

ಆದರೆ ಠಾಣೆಗೆ ಹೊಂದಿಕೊಂಡಂತೆ ಠಾಣೆಯ ಆವರಣದಲ್ಲಿ  ಕೇಕ್ ಕತ್ತರಿಸಿ ತಿನ್ನಿಸಿಸುತ್ತಿರುವ  ಚಿತ್ರ ವೈರಲ್ ಆಗಿದ್ದು ಸದಾ ಮಾಹಿತಿ ತಂತ್ರಜ್ಞಾನದ ಸೋಷಿಯಲ್ ಮೀಡಿಯಾ ಮಾನಿಟರಿಂಗ್  ಅಲ್ಲಿ  ಕಾರ್ಯೊನ್ಮುಖರಾದ ಇಲಾಖಾ ಸಿಬ್ಬಂದಿಗಳಿಗೆ ಹಾಗು ಎಸ್ಪಿ ಅವರಿಗೆ ಕಾಣದಿರುವುದು ಮಾತ್ರ ವಿಪರ್ಯಾಸ.

ಈ ಬಗ್ಗೆ ಚಾಮರಾಜನಗರ ಎಸ್ಪಿ ದಿವ್ಯ ಅವರನ್ನ ಸಂಪರ್ಕಿಸಲು ಮುಂದಾದರೂ ಯಾವುದೆ ಪ್ರತಿಕ್ರಿಯೆ ಕೊಡಲು ಅವರು ನಿರಾಕರಿಸಿದ್ದಾರೆ.

ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗಳ ಬಗ್ಗೆ ಸಾಕಷ್ಟು ದೂರುಗಳು ಇದ್ದರೂ ವಿಚಾರಣೆ ನಡೆಸದೆ  ಮೌನ ವಹಿಸಿರುವುದು ನೋಡಿದರೆ ಸಾಕಷ್ಟು ಅನುಮಾನಗಳನ್ನ ಮೂಡಿಸದೆ ಇರಲಾರದು.