ಟಿಪ್ಪರ್ ಪಲ್ಟಿ: ಇಬ್ಬರ ಸಾವು

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಲ್ಲಿ ಕಲ್ಲನ್ನ ಹೊತ್ತು ಸಾಗಿಸುತ್ತಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ದಿಂದ ರಸ್ತೆ ತಿರುವಿನಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಟಿಪ್ಪರ್ ಚಾಲಕ ಸತೀಶ್ (32), ಮಹೇಶ (28) ಸಾವನ್ನಪ್ಪಿದವರು.

ಮೃತರಿಬ್ಬರು ಮೂಲತಃ ಚುಂಚಳ್ಳಿ ಗ್ರಾಮದ ನಿವಾಸಿಗಳು.

ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಮೂಲಕ ಸಾಗಿ ನಂಜನಗೂಡು ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಸೇತುವೆ ಇದ್ದು ಈ ಸ್ಥಳದಲ್ಲಿ ಮುಂಜಾನೆ 5.30 ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.