ಶಿಕ್ಷಣ ಸಚಿವರ ಎಫ್ ಬಿಗೆ ಕನ್ನ ಹಾಕಿದ ಶೂರರು!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಿಡಿಗೇಡಿಗಳು ಪ್ರಸಿದ್ದ ಜನಸಾಮಾನ್ಯರ ಎಫ್ ಬಿ ಖಾತೆಗಳನ್ನ ಹ್ಯಾಕ್ ಮಾಡೋದು ಅಥವಾ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆಯೋದು ಸಾಮಾನ್ಯ.

ಆದರೆ ದುಷ್ಕರ್ಮಿಗಳು ಶಿಕ್ಷಣ ಸಚಿವರ ಎಫ್ ಬಿ ನಕಲು ಖಾತೆಯನ್ನ ತೆರೆದಿದ್ದಾರೆ.

ಈ ಬಗ್ಗೆ ಸ್ವಯಂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೆ ಅವರ ಅಸಲಿ ಎಫ್ ಬಿ ಖಾತೆಯ ವಾಲ್ ಅಲ್ಲಿ ಬರೆದುಕೊಂಡಿದ್ದು ಸ್ನೇಹ ವಿನಂತಿಯನ್ನ ಸ್ವೀಕರಿಸದಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ಅವರದೆ ಆದ ವಾಲ್ ಅಲ್ಲಿ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.