ಬಂಡೀಪುರ ಅರಣ್ಯದಲ್ಲಿ ಜಿಂಕೆಗೆ ತಿಂಡಿ ನೀಡಿದ ವರದಿಗಾರನಿಗೆ ದಂಡ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಜಿಂಕೆಗೆ ತಿಂಡಿ-ತಿನಿಸು ನೀಡಿದ ಮಾಧ್ಯಮ ವರದಿಗಾರನಿಗೆ ಅರಣ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ.

ನವದೆಹಲಿಯ ಎನ್ ಡಿ ಟಿವಿಯ ವರದಿಗಾರ ವಾಖ್ಹರ್ ಅಹಮದ್ ಅವರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

ಇದೇ ಆ. 3ರಂದು ಬೆಳಗ್ಗೆ ಬಂಡೀಪುರದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬಂಡೀಪುರ ವಲಯ
ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಪ್ರವಾಸಿಗರೊಬ್ಬರು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಂಕೆಯೊಂದಕ್ಕೆ ತಿಂಡಿ-
ತಿನಿಸುಗಳನ್ನು ಕೊಡುತ್ತಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಈ ಸಂಬಂಧ ಬಂಡೀಪುರ ವಲಯದ ಸಿಬ್ಬಂದಿಗಳು ಸದರಿ ಪ್ರವಾಸಿಗರನ್ನು ಪತ್ತೆಹಚ್ಚಿ ವಿಚಾರಿಸಿದಾಗ ಅವರು ನವದೆಹಲಿಯ ಎನ್ ಡಿ ಟಿವಿಯ ವರದಿಗಾರ ವಾಖ್ಹರ್ ಅಹಮದ್ ಎಂಬುದು ತಿಳಿದುಬಂದಿತು.

ನಂತರ ಅವರಿಗೆ ಅರಣ್ಯಾಧಿಕಾರಿಗಳು ಸೂಕ್ತ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.