ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದಂಡ ಹಾಕುತ್ತಿದ್ದ ಚಿತ್ರವನ್ನ ಸೆರೆಹಿಡಿದವನ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಿ ನಂತರ ಫೋಟೋ ಡಿಲೀಟ್ ಮಾಡಿಸಿ ಬೆದರಿಕೆ ಹಾಕಿದ ಘಟನೆ ಚಾಮರಾಜನಗರ ಪಟ್ಟಣದಲ್ಲಿ ನಡೆದಿದೆ.
ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ನಗರದ ಸಂಚಾರಿ ಪೊಲೀಸರು ಊರ ಹೊರಗೆ ನಿಂತು ದಂಡ ವಸೂಲಿಗೆ ಸೀಮಿತವಾಗಿದ್ದಾರೆ ಎಂಬ ಪ್ರಶ್ನೆ ಇದರಿಂದ ಮೂಡುತ್ತದೆ.
ವಾಹನ ತಪಾಸಣೆ ಹೆಸರಲ್ಲಿ ನಿಯಮಪಾಲನೆ ಮಾಡದೇ ಮನಸ್ಸಿಗೆ ಬಂದ ರೀತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಫೋಟೋ ತೆಗೆಯುತ್ತಿದ್ದವನ್ನು ಪ್ರಶ್ನಿಸಿದ ಸಂಚಾರಿ ಠಾಣೆಯ ಎಎಸ್ಐ ಫೋಟೋ ಯಾಕೆ ತೆಗೆಯುತ್ತಿಯಾ ಎಂದು ಕೇಳಿ, ವಾಹನದ ಎಲ್ಲಾ ದಾಖಲೆ ತಪಾಸಣೆ ಮಾಡಿ. ಆತನಿಗೆ ಕಿರುಕುಳ ನೀಡಿದ್ದಲ್ಲದೆ ನಿನ್ನ ಮೊಬೈಲ್ ನಲ್ಲಿರರು ಫೋಟೋ ಡಿಲಿಟ್ ಮಾಡು ಅಂತ ಹೇಳಿ ಮಾಡಿಸಿ ಜಪ್ತಿ ಮಾಡಿದ್ದ ವಾಹನ ಹಾಗೂ ಮೊಬೈಲ್ ಕೊಟ್ಟುಕಳಿಸಿದ್ದಾರೆ.
ಎಎಸ್ಐ ಗಿಂತ ಕೆಳದರ್ಜೆಯ ಸಿಬ್ಬಂದಿ ವಾಹನ ತಡೆಯುವಂತಿಲ್ಲ ಎಂಬ ನಿಯಮ ಇದ್ದರೂ ದಂಡ ಹಾಕೊ ಪೊಲೀಸರು ನಾಲ್ಕೈದು ಜನ ಸಿಬ್ಬಂದಿಯ ಜೊತೆ ಸಾರ್ವಜನಿಕರನ್ನ ಅಡ್ಡಗಟ್ಟೊದು, ಗೃಹರಕ್ಷಕ ಸಿಬ್ಬಂದಿಯಿಂದ ವಾಹನ ತಡೆಸೋದು., ಕೀ ಕಸಿದುಕೊಂಡು ತಪಾಸಣೆ ಮಾಡೋ ದೃಶ್ಯಗಳು ಚಾಮರಾಜನಗರದಲ್ಲಿ ವ್ಯಾಪಕವಾಗಿದೆ.
ಅವರದೆ ಆದ ಬಾಡಿಕ್ಯಾಮ್ ಅಲ್ಲಿ ಈ ಘಟನೆ ಎಲ್ಲವೂ ರೆಕಾರ್ಡ್ ಆಗಿದ್ದು, ದಂಡ ಹಾಕೊ ಪೊಲೀಸರು ಪ್ರಾಮಾಣಿಕವಾಗಿ ವಸೂಲಿ ಮಾಡ್ತಾ ಇದ್ದಾರಾ ಅಥವಾ ಅಕ್ರಮವಾಗಿ ವಸೂಲಿ ಮಾಡ್ತಾ ಇದ್ದಾರಾ ಎಂಬುದನ್ನ ಎಸ್ಪಿ ದಿವ್ಯ ಅವರು ಬಾಡಿಕ್ಯಾಮ್ ಪರಿಶೀಲಿಸಿ ಕ್ರಮ ಜರುಗಿಸಬೇಕಾಗಿದೆ.