ಆ. 23ರಿಂದ 9-12ನೇ ತರಗತಿ ಶಾಲೆ-ಕಾಲೇಜು ಆರಂಭ ಸಿಎಂ ಬೊಮ್ಮಾಯಿ

ಮಂಗಳೂರು: ಕೋವಿಡ್‌ ನಡುವೆಯೂ ಶೈಕ್ಷಣಿಕ ಚಟುವಟಿಕೆಗಳು  ರಾಜ್ಯದಲ್ಲಿ ಆ. 23ರಿಂದ 9 ರಿಂದ 12ನೇ ತರಗತಿವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರಿನಲ್ಲಿ ಗುರುವಾರ ಸಿಎಂ ಮಾಧ್ಯಮ  ಪ್ರತಿನಿಧಿಗಳೂಂದಿಗೆ ಮಾತನಾಡಿದರು.

 ಆ. 23ರಿಂದ 9 ರಿಂದ 12 ತರಗತಿವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು. ತಜ್ಞರ ಸಲಹೆಯಂತೆ ಬ್ಯಾಚ್ʼವೈಸ್ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.