ಸಿಎಂ ಬೊಮ್ಮಾಯಿಗೆ ಮುಚ್ಚಿದ ಲಕೋಟೆ ನೀಡಿದ ಶಾಸಕ ಎಸ್.ಎ. ರಾಮದಾಸ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೈಸೂರಿನ ಕೆ. ಆರ್. ಕೇತ್ರದ ಶಾಸಕ ಎಸ್.ಎ.ರಾಮದಾಸ್ ಶನಿವಾರ ಭೇಟಿಯಾಗಿ ಮುಚ್ಚಿದ ಲಕೋಟೆ ನೀಡಿದ್ದಾರೆ.

ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಸಿಎಂ ಬೊಮ್ಮಾಯಿ ಅವರ ನಿವಾಸಕ್ಕೆ ರಾಮದಾಸ್ ತೆರಳಿ ಚರ್ಚೆ ನಡೆಸಿದ್ದಾರೆ.

ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಶಾಸಕ ಎಸ್.ಎ.ರಾಮದಾಸ್ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ಮುಖ್ಯಮಂತ್ರಿಗಳಿಗೆ ಮುಚ್ಚಿದ ಲಕೋಟೆಯೊಂದನ್ನು ಕೊಟ್ಟು ಬಂದಿದ್ದೇನೆ. ನೀವು ಫ್ರೀ ಆಗಿದ್ದಾಗ ಓದು ಎಂದು ಹೇಳಿದ್ದೇನೆ ಎಂದರು.

ಮುಚ್ಚಿದ ಲಕೋಟೆಯಲ್ಲಿ ನನ್ನ ಕೆಲಸದ ಅನುಭವಗಳ ಪಟ್ಟಿ ಇದೆ. ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲವು ವಿಚಾರ ಚರ್ಚೆ ಮಾಡಲಾಗಿದೆ. ನನಗೆ ಸಚಿವ ಸ್ಥಾನ ಕುರಿತು ಸಿಎಂರೊಂದಿಗೆ ಮಾತನಾಡಿಲ್ಲ ಎಂದು ರಾಮದಾಸ್ ತಿಳಿಸಿದರು.