ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು ನಿಯೋಜಿಸದ ಕಾರಣ ಜಿಲ್ಲಾಧಿಕಾರಿ ಎಂ. ಆರ್. ರವಿ ಅವರು ಈ ಬಾರಿ 75 ರ ಸ್ವಾತಂತ್ರ್ಯ ದಿನದ ಅಂಗವಾಗಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿಗಳು, ಸ್ವಾತಂತ್ರ್ಯ ಸೇನಾನಿಗಳು, ವೀರ ಯೋಧರನ್ನ ಈ ಸಂಧರ್ಭದಲ್ಲಿ ನೆನೆದು ಜಿಲ್ಲೆಯ ಅಬಭಿವೃದ್ಧಿ ಕಾಮಗಾರಿ,ಯೋಜನೆ ಇನ್ನಿತರ ಇಲಾಖಾ ಯೋಜನೆಗಳ ಬಗ್ಗೆ ಹೇಳಿದರು.
ಜಿಲ್ಲಾಡಳಿತ ಪೊಲೀಸ್ ಇಲಾಖೆಯ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ,ಅರಣ್ಯ ಇಲಾಖೆ, ಗೃಹರಕ್ಷಕ ಸಿಬ್ಬಂದಿ, ಸ್ಕ್ವೌಟ್ & ಗೈಡ್ಸ್ ಅವರಿಂದ ಆಕರ್ಷಕ ಪಥಸಂಚಲನ ನೆರವೇರಿತು.
ಶಾಲಾ ಮಕ್ಕಳು ಇಲ್ಲದೆ ಇರೋ ಕಾರಣ ಕಾರ್ಯಕ್ರಮದ ಆಕರ್ಷಕ ಕೇಂದ್ರ ಬಿಂದು ಮಕ್ಕಳ ನೃತ್ಯ ಇಲ್ಲದೆ ಕ್ರೀಡಾಂಗಣ ಕಳೆಗುಂದಿತ್ತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಸ್ಪಿ ದಿವ್ಯ, ಎಎಸ್ಪಿ ಸುಂದರರಾಜು, ಜಿ.ಪಂ.ಸಿ.ಇ.ಓ ಹಾಜರಿದ್ದರು.