ಮೈಸೂರು ಸರಸ್ವತಿಪುರಂ ಪೊಲೀಸರಿಂದ ಆಟೋ ಕಳ್ಳತನ ಬಂಧನ

ಮೈಸೂರು: ಆಟೋ ಕಳವು ಮಾಡಿದ್ದ ಆರೋಪಿಯನ್ನು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ರಾಮಕೃಷ್ಣನಗರ ವಾಸಿ ಪೈಟಿಂಗ್ ಕೆಲಸ ಮಾಡುವ ಶರತ್ (25) ಬಂಧಿತ ಆರೋಪಿ.

ಬಂಧಿತನಿಂದ ಪೊಲೀಸರು ಸುಮಾರು 1 ಲಕ್ಷ ರೂ. ಮೌಲ್ಯದ 2 ಪ್ಯಾಸೆಂಜರ್ ಆಟೋರಿಕ್ಷಾ ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಆ.15ರಂದು ಸರಸ್ವತಿಪುರಂ ಪೊಲೀಸ್ ಠಾಣಾ ಸಿಬ್ಬಂದಿ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ, ಪಂಪಾಪತಿ ರಸ್ತೆಯಲ್ಲಿ ಕೆಎ 09 ಎ 7852 ನಂಬರ್ನ ಪ್ಯಾಸೆಂಜರ್ ಆಟೋ ನಿಂತಿದ್ದು, ಆಟೋದಲ್ಲಿದ್ದ ವ್ಯಕ್ತಿಯನ್ನುಪೊಲೀಸರು ವಿಚಾರಿಸಲಾಗಿ ಆತ ಹೆಸರು, ವಿಳಾಸವನ್ನು ಸರಿಯಾಗಿ ತಿಳಿಸದೆ, ಆಟೋ ರಿಕ್ಷಾದ ದಾಖಲಾತಿಗಳನ್ನು ಕೇಳಾಗಿ ಸಮಂಜಸವಾದ ಉತ್ತರವನ್ನು ನೀಡದ ಕಾರಣ ಆಟೋರಿಕ್ಷಾ ಸಮೇತ ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಗಿ ಆರೋಪಿಯು ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ಬಳಿ ಸದರಿ ಆಟೋರಿಕ್ಷಾವನ್ನು ಕಳ್ಳತನ ಮಾಡಿದ್ದಾಗಿಯೂ ಹಾಗೂ ದೇವರಾಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೊಂದು ಪ್ಯಾಸೆಂಜರ್ ಆಟೋರಿಕ್ಷಾ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರ ಡಿ.ಸಿ.ಪಿ ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಎಸಿಪಿ ಎಂ.ಎಸ್ ಪೂರ್ಣಚಂದ್ರ ತೇಜಸ್ವಿರವರ ಉಸ್ತುವಾರಿಯಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆ ಪಿ.ಐ. ತಿಮ್ಮರಾಜು, ಪಿ.ಎಸ್.ಐ ರಮೇಶ್ ಮತ್ತು ಸಿಬ್ಬಂದಿಯವರುಗಳಾದ ಬಸವರಾಜೇ ಅರಸು, ರಾಘವೇಂದ್ರ, ಕುಮಾರ್, ಹರೀಶ್ಕುಮಾರ್, ಉಮೇಶ್ ಮಂಜುನಾಥ್, ಕರಿಗೌಡ ಅವರುಗಳು ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಪ್ರಶಂಶಿಸಿದ್ದಾರೆ.