ಸಿದ್ದರಾಮಯ್ಯ ಜೋತಿಷ್ಯದ ಅಂಗಡಿ ತೆರೆದಿದ್ದಾರೆ -ನಳಿನ ಕುಮಾರ ಕಟೀಲ್

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಜೋತಿಷ್ಯದ ಅಂಗಡಿ ತೆರೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ನೇತೃತ್ವದಲ್ಲಿ ನಡೆದ, ಜಾನಾರ್ಶೀವಾದ ಯಾತ್ರೆಯಲ್ಲಿ ನಳಿನ ಕುಮಾರ ಕಟೀಲ್ ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲು ಕಾಂಗ್ರೆಸ್ ನಾಯಕರಿಗೆ ನಿರುದ್ಯೋಗದ ಭಾವನೆ ಹುಟ್ಟಿಸಿದೆ. ಮುಂದಿನ ದಿನಮಾನಗಳಲ್ಲಿ ನಿರೋಧ್ಯೋಗಿಗಳಾಗ್ತಿವಿ ಅಂತ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಈಗ ರಾಜ್ಯದಲ್ಲಿ ಸಿದ್ದರಾಮಯ್ಯಜೋತಿಷ್ಯದ ಅಂಗಡಿ ತೆರೆದು ಭವಿಷ್ಯ ಹೇಳಲು ಶುರು ಮಾಡಿದ್ದಾರೆಂದು ಟೀಕಿಸಿದರು.

ಕಳೆದ ದಿನ ನಮ್ಮ ಸಿಎಂರವರು ಅಮೃತ ಯೋಜನೆ ಮೂಲಕ ರಾಜ್ಯ ಪರಿವರ್ತನೆ ಮಾಡುತ್ತೆನೆ ಎಂದು ಹೇಳಿದರೋ, ಆಗ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ದಾರಿ ಇದೆ, ಅದೂ ಭವಿಷ್ಯದ ಅಗಂಡಿ ಅಥವಾ ಮೋಸದ ಅಂಗಡಿ ತೆರೆಯುವುದಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ನವರು ದೇಶವನ್ನ ಲೂಟಿ ಮಾಡುತ್ತಲೇ ಬಂದಿದ್ದರು. ಅದಕ್ಕಾಗಿ ಕೆಲವರು ತಿಹಾರ ಜೈಲಿನಲ್ಲಿ ಕುಳಿತ್ತಿದ್ದರು. ಬಳಿಕ ಅವರನ್ನು ಜೈಲಿನಿಂದ ಮೆರವಣಿಗೆ ಮಾಡುವ ಮೂಲಕ ಕರೆದುಕೊಂಡು ಬರಲಾಯಿತು ಎಂದು ಕಟೀಲ್ ಹೇಳುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರವರಿಗೂ ಟಾಂಗ್ ನೀಡಿದರು.

ಈಗಾಗಲೇ ಮುಂದಿನ ಸಿಎಂ ನಾನು, ಮುಂದಿನ ಮುಖ್ಯಮಂತ್ರಿ ನಾನು ಆಗುತ್ತೇನೆ ಎಂದು ಕಾಂಗ್ರೆಸ್ ಪಾರ್ಟಿಯಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಕಿತ್ತಾಟ ನಡೆಯುತ್ತಿದೆ. ಇದೇ ಜಗಳ ಬಿಜೆಪಿಯಲ್ಲಿ ಆರಂಭವಾಗುತ್ತೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿದ್ದರು. ಆದರೆ ಬಿಜೆಪಿ ಜಗಳದ ಪಾರ್ಟಿಯಲ್ಲ, ಸಾಮರಸ್ಯದ ಪಕ್ಷ ಎಂದು ಕಟೀಲ್ ಮಾರ್ಮಿಕವಾಗಿ ಹೇಳಿದರು.