ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ವಾಹನ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಸಾವನ್ನಪ್ಪಿದ ದ್ವಿಚಕ್ರ ವಾಹನ ಸವಾರ ಮಂಗಲದ ಶ್ರಿನಿವಾಸ್ (40) ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ತಮ್ಮ ಗ್ರಾಮವಾದ ಮಂಗಲದಿಂದ ಸಂತೆಮರಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಯಡಿಯೂರು-ಹುಲ್ಲೇಪುರ ಗ್ರಾಮ ಅನತಿ ದೂರದಲ್ಲಿ ಸಂತೆಮರಳ್ಳಿ ಕಡೆಯಿಂದ ಚಾಮರಾಜನಗರದೆಡೆಗೆ ಬರುತ್ತಿದ್ದ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದಿದೆ ಎನ್ನಲಾಗಿದೆ.
ಹೈವೆ ಮೊಬೈಲ್ ಪೊಲೀಸರು & ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.