ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: 7303 ಪ್ರಕರಣಗಳ ಪೈಕಿ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಒಳಗೊಂಡಂತೆ 3659 ಪ್ರಕರಣಗಳು ಇತ್ಯರ್ಥಗೊಂಡು 8,19,33,370 ರೂ. ಪರಿಹಾರ ಒದಗಿಸಲಾಗಿದೆ.
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಮೆಗಾ ಲೋಕ ಅದಾಲತ್ ನಲ್ಲಿ 7ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರದಾನ ನ್ಯಾಯಾಲಯದ ನ್ಯಾಯಾಧೀಶ ಬಸವರಾಜು ಸುಲ್ತಾನ್ ಪುರಿ ಅವರು ತಿಳಿಸಿದರು.
ಅವರು ಜಿಲ್ಲಾ ನ್ಯಾಯಾಲಯ ವ್ಯಾಜ್ಯಪೂರ್ವ ಪರಿಹಾರ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆಗಸ್ಟ್ 1ರ ತನಕ 21389 ಪ್ರಕರಣ ಬಾಕಿ ಇದ್ದು, 7303 ಪ್ರಕರಣಗಳ ಪೈಕಿ 3659 ಪ್ರಕರಣ ಇತ್ಯರ್ಥವಾಗಿದ್ದು ಶೇ. 49.06% ಪ್ರಮಾಣದಲ್ಲಿ ರಾಜೀ ಸಂದಾನವಾಗಿ ರಾಜ್ಯದಲ್ಲಿ ಚಾಮರಾಜನಗರ 7ನೇ ಸ್ಥಾನ ಪಡೆದುಕೊಂಡಿದೆ ಎಂದರು.
ಒಟ್ಟಾರೆ ಪ್ರಕರಣದಲ್ಲಿ 8.19,33,370 ರೂ ನಷ್ಟ ಪರಿಹಾರವನ್ನ ನೀಡಲಾಗಿದೆ. ಆಗಸ್ಟ್ 14ರಂದು 2976 ಪ್ರಕರಣ, 16ರಂದು 683 ಪ್ರಕರಣ ಇತ್ಯರ್ಥ ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯ ಕಾರ್ಯದರ್ಶಿ ಎಮ್. ಶ್ರೀಧರ್ ಹಾಜರಿದ್ದು, ಮೆಗಾ ಲೋಕ ಅದಾಲತ್ ನಲ್ಲಿ ಪಾಲ್ಗೊಳ್ಳುವುದರಿಂದ ಕಕ್ಷಿದಾರರು ಸಮಯ ಮತ್ತು ಹಣ ವ್ಯಯ ಮಾಡಿಕೊಳ್ಳುವುದನ್ನ ತಪ್ಪಿಸಬಹುದು ಎಂದು ತಿಳಿಸಿದರು.