ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕೊವೆಡ್ ನಿಯಮಗಳು ಜನಸಾಮಾನ್ಯರಿಗೆ ಒಂದು ರಾಜಕಾರಣಿಗಳಿಗೆ ಒಂದು ಅನ್ನೊ ಮಾತು ಅಕ್ಷರಶಃ ಸತ್ಯವಾಗಿದೆ.
ಮೂಲೆಹೊಳೆ ಚೆಕ್ ಪೆÇಸ್ಟ್ ಗೆ ಭೇಟಿ ನೀಡುವ ಮುನ್ನ ಉಸ್ತುವಾರಿ ಸಚಿವರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ವಿಶೇಷ ದರ್ಶನ ಮಾಡಿದರು.
ಜಿಲ್ಲಾಡಳಿತ, ಶ್ರಾವಣ ಶನಿವಾರದಂದು ಎಲ್ಲಾ ಪ್ರಮುಖ ದೇವಾಲಯಗಳಿಗೆ ಸಂಪೂರ್ಣ ನಿರ್ಬಂದ ಹೇರಿದೆ.
ಆದರೆ ವಿಪರ್ಯಾಸವೆಂದರೆ ಜಿಲ್ಲಾಡಳಿತ ಆದೇಶವನ್ನ ಜಿಲ್ಲಾ ಉಸ್ತುವಾರಿ ಸಚಿವರೆ ಉಲ್ಲಂಘಿಸಿ ಕೊವೆಡ್ ನಿಯಮ ಉಲ್ಲಂಘಿಸಿದ್ದಾರೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಅವರನ್ನ ಮಾಧ್ಯಮದವರು ಪ್ರಶ್ನಿಸಿದಾಗ, ನಮಗೆ ಜಿಲ್ಲೆಯ ಉಸ್ತುವಾರಿ ಇದೆ. ಆ ನಿಯಮಗಳನ್ನೆ ಪರಿಶೀಲಿಸಲು ತೆರಳಿದ್ದೆ ಎಂದು ಮಾರ್ಮಿಕವಾಗಿ ಉತ್ತರಿಸಿ ನುಣುಚಿಕೊಂಡರು.
ಸಹಕಾರ ಸಚಿವರು ಹಾಗೂ ಚಾಂರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಗಡಿಭಾಗದ ಮೂಲೆಹೊಳೆ ಚೆಕ್ ಪೆÇಸ್ಟ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಗಡಿಭಾಗದಲ್ಲಿ ವಾಹನಗಳಲ್ಲಿ ಪ್ರಯಾಣಿಸುವವರು ಕಡ್ಡಾಯ ಆರ್ ಟಿಪಿಸಿಆರ್ ತಪಾಸಣೆ ವರದಿ ತೋರಿಸಿದರೆ ಮಾತ್ರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದ್ದು ಈ ಸಂಬಂಧ ಅದಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಎಂ. ಆರ್. ರವಿ, ಆರೋಗ್ಯ ಅಧಿಕಾರಿ ರವಿ ಮತ್ತು ಎಎಸ್ಪಿ ಸುಂದರರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಸಚಿವರೊಂದಿಗಿದ್ದರು.
ಸಚಿವರೊಂದಿಗೆ ಇದ್ದ ಅಧಿಕಾರಿಗಳು ಕೊವಿಡ್ ನಿಯಮದಂತೆ ಅಂತರವನ್ನು ಕಾಯ್ದುಕೊಂಡಿರಲಿಲ್ಲ.
ಇದನ್ನು ನೋಡಿದ ಸ್ಥಳೀಯರು ನಮಗೆ ಮಾತ್ರ ಕೊವಿಡ್ ನಿಯಮಾನಾ? ಜನಪ್ರತಿನಿಧಿಗಳು, ಅಧಿಕಾರಿಗಳಿಗಿಲ್ಲವೆ ಎಂದು ಮಾತನಾಡಿಕೊಳ್ಳುತ್ತಿದ್ದರು.