ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಐಚರ್ ವಾಹನ ಪಲ್ಟಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಪಣ್ಯದಹುಂಡಿ ಗ್ರಾಮ ಸಮೀಪ ನಡೆದಿದೆ.
ಹಳೆಬ್ಯಾಡಮೂಡ್ಲು ಗ್ರಾಮದ ಚಿಕ್ಕ ಮಹದೇವು(21) ಸ್ಥಳದಲ್ಲೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ .
ಚಾಲಕ ಸೇರಿದಂತೆ ವಾಹನದಲ್ಲಿದ್ದ ಮೂವರು ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಳೆಗೊನೆ ತುಂಬಿಕೊಂಡು ನಂಜನಗೂಡು ಕಡೆಯಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದು ಮಾರ್ಗಮದ್ಯೆ ಪಣ್ಯದಹುಂಡಿ ಗ್ರಾಮ ಸಮೀಪ ಈ ಅಪಘಾತ ಸಂಭವಿಸಿದೆ. ಸಂಚಾರಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.