ತನಿಖಾಧಿಕಾರಿಗಳು ಶ್ರದ್ಧೆ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ -ನ್ಯಾ. ಸದಾಶಿವ ಸುಲ್ತಾನ್ ಪುರಿ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಂರಾಜನಗರ: ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೆÇಲೀಸ್ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ತನಿಖಾ ಸಹಾಯಕರ ಪುನಶ್ಚೇತನ ಮತ್ತು ತನಿಖಾ ಸಮಯದಲ್ಲಿ ತನಿಖಾಧಿಕಾರಿಯ ಪಾತ್ರದ ಕುರಿತ ಒಂದು ವಾರದ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ನಗರದ ಜಿಲ್ಲಾ ಪೆÇಲೀಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ನೆರವೇರಿಸಿದರು.

ನಂತರ ಮಾತನಾಡಿದ ಅವರು, ತನಿಖಾಧಿಕಾರಿಗಳು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕೆಲಸವಾಗಿ ನಿರ್ವಹಿಸಬೇಕು. ಈ ದಿಸೆಯಲ್ಲಿ ಕಾನೂನು ಅರಿವು, ಸಾಮಾನ್ಯ ತಿಳುವಳಿಕೆ, ಜ್ಞಾನ, ಆವಾಗಾವಾಗ ನವೀಕರಿಸಲ್ಪಟ್ಟ ಕಾನೂನಿನ ಮಾಹಿತಿ ತಿಳಿಯುವುದು ಅಗತ್ಯ ಎಂದರು.

ತನಿಖಾಧಿಕಾರಿಯಾದವರು ಸಾಕ್ಷಿಗಳನ್ನ ಪ್ರಾಮಾಣಿಕವಾಗಿ ಕ್ರೋಢಿಕರಿಸಬೇಕು.ಈ ದಿಸೆಯಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ ಪೂರಕವಾಗಿರುತ್ತದೆ. ಆವಾಗ ಪ್ರಕರಣಗಳು ಸದೃಢವಾಗಿ ನಿಲ್ಲುತ್ತದೆ. ಸಾಕ್ಷಿಗಳ ಕೊರತೆಯಿಂದ ಎಷ್ಟೋ ಸಲ ನ್ಯಾಯಾಲಯದ ಮುಂದೆ ಅಪಹಾಸ್ಯವನ್ನ ಎದುರಿಸಬೇಕಾಗುತ್ತದೆ. ಸಾಕ್ಷಿಯ ಜೊತೆಗೆ ಸಾಕ್ಷಿದಾರರಿಗೆ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಲಹೆ ನೀಡಿದರು.

ತನಿಖಾಧಿಕಾರಿಗಳು ಸೋಲಿನ ಪ್ರಕರಣವಾಗಲಿ, ಗೆಲುವಿನ ಪ್ರಕರಣದ ಬಗ್ಗೆಯಾಗಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುವುದರಿಂದ ಇತರರಿಗೆ ಮಾರ್ಗದರ್ಶನ ಆಗಲಿದೆ ಎಂದರು.

ನ್ಯಾಯಾಲಯದಲ್ಲಿ ನಿಯೋಜನೆಯಾಗೋ ಆರಕ್ಷಕರು ಪ್ರಕರಣ ಬಗ್ಗೆ ಸಾಕ್ಷಿದಾರರಿಗೆ ಘಟನಾಪೂರ್ವ ಮನವರಿಕೆ ಮಾಡಿಕೊಡಬೇಕು. ಸಮನ್ಸ್ ಜಾರಿ ಮಾಡಿದಾಗಿನಿಂದ ಸಾಕ್ಷಿದಾರರು ನ್ಯಾಯಾಲಯಕ್ಕೆ ನಿರ್ಭಿತಿಯಿಂದ ಮುಕ್ತ ಮನಸ್ಸಿನಿಂದ ಹಾಜರಾಗುವ ತನಕ ನೋಡಿಕೊಳ್ಳುವ ಜವಾಬ್ದಾರಿ ಪಡೆಯಬೇಕು. ಬೇರೆಯವರಿಂದ ಕಿರುಕುಳ ಅನುಭವಿಸದೆ ಇರುವಂತೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರಲ್ಲದೆ ಪೆÇಲೀಸರು ಸಿಆರ್ ಪಿಸಿ ಹಾಗೂ ಎವಿಡೆನ್ಸ್ ಆ್ಯಕ್ಟ್ ಗಳ ಬಗ್ಗೆ ಅರಿತು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಪೆÇಲೀಸರು ಅಧಿಕಾರ ಇದೆ ಅಂತ ದುರುಪಯೋಗ ಮಾಡಿಕೊಳ್ಳಬೇಡಿ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ಪ್ರತಿ ಜನರಿಂದ ಸಲ್ಯೂಟ್ ಪಡೆಯಬಹುದು. ಅಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಪದೇ ಪದೇ ನಾವೆ ಬೇರೆಯವರಿಗೆ ಸಲ್ಯೂಟ್ ಹೊಡೆಯಬೇಕಾಗುತ್ತದೆ ಎಂದು ಅಬ್ದುಲ್ ಕಲಾಂ ಅವರ ವಾಕ್ಯವೊಂದನ್ನ ಸಂದರ್ಭದಲ್ಲಿ ಹೇಳಿದರು.

ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಧರ್ ಮಾತನಾಡಿ, ಸಮಾಜ ಶಾಂತಿ ಮತ್ತು ಸದೃಢವಾಗಿರಲು ಪೆÇಲೀಸರ ಪಾತ್ರ ಅಪಾರ. ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ದಾಖಲಿಸಿದಾಗ ಇರೋ ಹುಮ್ಮಸ್ಸು ಪ್ರಕರಣ ಮುಗಿಯೊ ತನಕ ಇರಬೇಕು. ಕೆಲವರಲ್ಲಿ ಆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ತನಿಖಾಧಿಕಾರಿಗಳು ಸಾಕ್ಷಿದಾರರು, ಆರೋಪಿಗಳ ಶಾಶ್ವತ ಹಾಗೂ ತಾತ್ಕಾಲಿಕ ವಿಳಾಸಗಳನ್ನೊಳಗೊಂಡ ದಾಖಲೆಗಳ ನಕಲು ಪಡೆಯುವುದರಿಂದ ಸರಿಯಾದ ಸಮಯಕ್ಕೆ ಸಂಬಂದಪಟ್ಟವರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಹಕಾರಿಯಾಗಲಿದೆ ಎಂದರು.

ವೈಯುಕ್ತಿಕ ಜವಾಬ್ದಾರಿ ಪಡೆದು ಕೆಲಸ ನಿರ್ವಹಿಸಿದಾಗ ಪ್ರಕರಣ ಬೇಗ ವಿಲೇವಾರಿಯಾಗಲಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಸಹಕರಿಸಲು ನ್ಯಾಯಾಲಯದಲ್ಲಿ ಅಭಿಯೋಜರುಗಳು ಇರ್ತಾರೆ ಅವರೊಂದಿಗೆ ಚರ್ಚಿಸಬೇಕು. ಪ್ರಾಮಾಣಿಕ ವ್ಯಕ್ತಿಗಳ ರಕ್ಷಣೆ ಇಲಾಖೆ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದರು.

ವಾಸ್ತಾವಾಂಶಕ್ಕನುಗುಣವಾಗಿ ಕೆಲಸ ನಿರ್ವಹಿಸಿದಾಗ ಅತ್ಯಲ್ಪ ಸಮಯದಲ್ಲಿ ಪ್ರಕರಣ ಮುಗಿಯಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಪಿ ದಿವ್ಯ, ಎಎಸ್ಪಿ ಸುಂದರರಾಜು, ವಕೀಲ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಹಾಜರಿದ್ದರು.