ತಲೆಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು -ಸಚಿವ ಉಮೇಶ್ ಕತ್ತಿ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು, ಅದನ್ನು ನಾವು ಆಹಾರ ಭದ್ರತೆಯಡಿ 4.1 ಕೋಟಿ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಎಂದು ಹೇಳಿದರು.

ಬಂಡೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು ಆದರೆ, ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಿದ್ದಾರಷ್ಟೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಪಡಿತರದಾರರ ಇಕೆವೈಸಿ ಶೇ. 70 ಮುಗಿದಿದ್ದು ಅನರ್ಹ ಪಡಿತರದಾರರನ್ನು ಕೈಬಿಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದೆ. ಸಂಪೂರ್ಣ ಇಕೆವೈಸಿ ಆದ ಬಳಿಕ ಎಷ್ಟು ಪಡಿತರ ಉಳಿತಾಯ ಆಗಲಿದೆ ಎಂವುದು ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ
ನನಗೀಗ 60 ವರ್ಷ ವಯಸ್ಸು ಆದ್ದರಿಂದ ಇನ್ನು 15 ವರ್ಷವಿದ್ದು ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ, ಮುಂದೆ ನೋಡೋಣ ಎಂದು ಸಿಎಂ ಆಗುವ ಬಯಕೆಯನ್ನು ಮತ್ತೊಮ್ಮೆ ಹೊರಹಾಕಿದರು.

ಕ್ರಾಂತಿಕಾರಕ ಯೋಜನೆ ತರುತ್ತೇನೆಂದು ಹೇಳಿರುವ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಧಿಕಾರಕ್ಕೆ ಬರುವುದಿಲ್ಲ ಆದ್ದರಿಂದಲೇ ಈ ಮಾತು ಆಡುತ್ತಿದ್ದಾರೆ ಎಂದು ಕುಟುಕಿದರು.

ರಸ್ತೆ ಅಗಲೀಕರಕ್ಕೆ ಅವಕಾಶ ಕೊಡಲ್ಲ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಗಲೀಕರಣದ ಪ್ರಸ್ತಾಪಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆಯಲಾಗಿದೆ. ಯಾವ ಕಾರಣಕ್ಕೂ ರಸ್ತೆ ಅಗಲೀಕರಣ ಮತ್ತು ರಾತ್ರಿ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ನಿರ್ಧಾರಕ್ಕೆ ಬದ್ಧ
ಗಣೇಶೋತ್ಸವಕ್ಕೆ ಅವಕಾಶ ನೀಡದಿರುವ ಸಂಬಂಧ ಅವರು ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧ. ಅವರು ಯಾವ ತೀರ್ಮಾನ ತೆಗೆದುಕೊಳ್ಳೋತ್ತಾರೋ ನೋಡೋಣ ಎಂದು ಹೇಳಿದರು.