ಎಸಿಬಿ ಬಲೆಗೆ ಬಿದ್ದ ಇಂಜಿನಿಯರ್

ಚಾಮರಾಜನಗರ: ಸಿವಿಲ್ ಕಂಟ್ರಾಕ್ಟರ್ ವೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಎಸಿಬಿ ಬಲೆಗೆ ಬಿದಿದ್ದಾರೆ.

ಇಂಜಿನಿಯರ್ ಶಿವರಾಜು ಎಂಬುವರೆ ಎಸಿಬಿ ಗಾಳಕ್ಕೆ ಸಿಕ್ಕಿಬಿದ್ದವರು.

ಚಾಮರಾಜನಗರ ತಾಲ್ಲೂಕು ಯಣಗುಂಬ ಗ್ರಾಮದ ಸಿವಿಲ್ ಕಂಟ್ರಾಕ್ಟರ್ ವೈ.ಪಿ. ಮಂಜುನಾಥ ಅವರಿಗೆ ನೀಡಬೇಕಾಗಿದ್ದ ನರೇಗ ಯೋಜನೆಯಡಿಯ ರಸ್ತೆ ಕಾಮಗಾರಿ ಮತ್ತು ಕೆರೆ ಅಭಿವೃದ್ಧಿ ಮಾಡಿರುವ ವೆಚ್ಚದ ಬಿಲ್ ಹಣಕ್ಕಾಗಿ ಶಿವರಾಜು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಬಿಲ್ ನ ಮೊತ್ತ 9 ಲಕ್ಷ ರೂ.ಗೆ 30 ಸಾವಿರ ಲಂಚದ ಹಣಕ್ಕೆ ಇಂಜಿನಿಯರ್ ಬೇಡಿಕೆ ಇತ್ತಿದ್ದರು. ಈ ಪೈಕಿ 10 ಸಾವಿರ ರೂ.ಗಳನ್ನು ಶಿವರಾಜ್ ಮಂಜುನಾಥ್ ಅವರಿಂದ ಇದೇ ಆ. 21ರಂದು ಪಡೆದಿದ್ದರು.

ಮಂಜುನಾಥ್ ಎಸಿಬಿಗೆ ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗುರುವಾರ ಉಳಿದ ಲಂಚದ ಹಣ 20 ಸಾವಿರವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಂಜಿನಿಯರ್ ಶಿವರಾಜು ಅವರನ್ನು ಬಂಧಿಸಿದ್ದಾರೆ.

ಚಾಮರಾಜನಗರ ಪೊಲೀಸ್ ಠಾಣೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಜಿನಿಯರ್ ಶಿವರಾಜು ಸಿಕ್ಕಿ ಬಿದ್ದಿರುತ್ತಾರೆ. ಆರೋಪಿಯನ್ನು ದಸ್ತಗಿರಿ ಮಾಡಿ,ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.