ಚಾಮರಾಜನಗರ: ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು ಎಂಬ ವಿವಾದಿತ ಹೇಳಿಕೆಯನ್ನು ಆಹಾರ ಸಚಿವ ಉಮೇಶ್ ಕತ್ತಿ ಸಮರ್ಥಿಸಿಕೊಂಡು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕೆ. ಗುಡಿಯಲ್ಲಿ ಶುಕ್ರವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮನುಷ್ಯನ ಲೆಕ್ಕದಲ್ಲಿ 5 ಕೆಜಿ ಅಕ್ಕಿ ಸಾಕು, ಊಟ ಮಾಡಿ ಬದುಕಲು 5 ಮನುಷ್ಯ ಪ್ರಾಣಿಗೆ ಸಾಕು, ಹೇಳಿಕೆಯನ್ನು ವಾಪಾಸ್ ಪಡೆಯಲ್ಲ ಎಂದರು.
10 ಕೆಜಿ ಅಕ್ಕಿ ಕೊಡ್ತೀನಿ ಅಂತಾ ಸಿದ್ದರಾಮಯ್ಯ ಘೋಷಣೆ ಮಾಡ್ತಾ ಇದಾನೆ, ಇದು ಸಿಎಂ ಆದ ಬಳಿಕ ಕೊಡ್ತಾನೆ, ಹಿಂದೆ ಯಾಕ್ ಮುಖ್ಯಮಂತ್ರಿ ಆದಾಗ ಯಾಕ್ ಕೊಡಲಿಲ್ಲ, ಮೊದಲು 5 ಕೊಟ್ಟ ಆಮೇಲ್ 7 ಮಾಡಿದ ಮತ್ತೇ ಒಂದು ಕೆಜಿ ಕಳೆದ, ಆಮೇಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು ಅವರು 5 ಕೊಟ್ಟರು ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಹಾರಿಕೆ ಉತ್ತರ
ವಾರಾಂತ್ಯದ ಸಫಾರಿ ನಡೆದಿರುವುದು, ಬೂದಿಪಡಗ ಗೆಸ್ಟ್ ಗೌಸಿನಲ್ಲಿ ಸಂಬಂಧಿಕರೊಂದಿಗೆ ಉಪ ವಲಯ ಅರಣ್ಯಾಧಿಕಾರಿವೊರ್ವ ಕ್ರಿಕೆಟ್ ಆಡಿದ ಬಗ್ಗೆ ಪ್ರಶ್ನೆ ಕೇಳಿದಾಗ ಮಾಹಿತಿ ಇಲ್ಲಾ, ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂಬ ಹಾರಿಕೆ ಉತ್ತರ ಕೊಟ್ಟರು.