ಡಿ.ಕೆ. ಶಿವಕುಮಾರ್ ಎಷ್ಟು ಬಡ ಜನರ ಉದ್ದಾರ ಮಾಡಿದ್ದಾರೆಂದು ಹೇಳಲಿ -ಸಚಿವ ಗೋವಿಂದ್ ಕಾರಜೋಳ

ಬೆಳಗಾವಿ: ಬಡವರ ಉದ್ದಾರ ಮಾಡುತ್ತೇನೆ ಎಂದು ಎಷ್ಟು ಜನರಿಗೆ ಉದ್ಧಾರ ಮಾಡಿದ್ದೆ ಮೊದಲು ಡಿ.ಕೆ.ಶಿವಕುಮಾರ್ ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಕೇಳುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಿಕ್ ಬ್ಯಾಕ್ ಆಗಿದೆ ಎನ್ನುವ ಆರೋಪಕ್ಕೆ ದಾಖಲಾತಿ ಬಿಡುಗಡೆ ಮಾಡಲು ಸವಾಲು ಹಾಕಿದರು.

ಒಂದೂವರೆ ವರ್ಷದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸಿ ಮಹಾನಗರದ ಜನತೆಗೆ ಕೊಡಲಾಗುವುದು. ಪಾರ್ಕಿಂಗ್ ಸಮಸ್ಯೆಗೆ ಜಾಗಗಳನ್ನು ಗುರುತು ಮಾಡಿ ಸಂಚಾರ ಸಮಸ್ಯೆ ಮುಕ್ತಿ ಹಾಡಲು ಯೋಜನೆ ರೂಪಿಸುತ್ತಿದ್ದೇವೆ ಎಂದವರು ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸೆ. 3ಕ್ಕೆ ಮತದಾನ ಇದೆ. ಈ ನಿಟ್ಟಿನಲ್ಲಿ 58 ವಾರ್ಡ್‍ಗಳ ಪೈಕಿ 56 ಅಭ್ಯರ್ಥಿ ಕಣದಲ್ಲಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರು ಮತದಾನ ಮಾಡುತ್ತಾರೆ ಎಂದರು.

ಬುಡಾದಿಂದ ಹೊಸ ಬಡಾವಣೆಯ ನಿರ್ಮಾಣ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ. ಕೋವಿಡ್ ನಿಂದ ಉದ್ಯೋಗ ಕಳೆದುಕೊಂಡವರಿಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಕೊಡಿಸುವ ವ್ಯವಸ್ಥೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ ಎಂದರು.

ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಜು, 16 ತಳಿಗಳ ಮಾವು ಬೆಳೆಯುತ್ತಾರೆ. ನಾವು ಬೆಳೆಯುವ ಮಾವನ್ನು ಬೇರೆ ರಾಜ್ಯದವರು ಫುಡ್ ಮಾಡಿ ಮಾರಾಟ ಮಾಡುತ್ತಾರೆ. ಈ ನಿಟ್ಟಿನಲ್ಲಿ ಫುಡ್ ಪೆÇ್ರಸೆಸಿಂಗ್ ಯುನಿಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ನಗರದಲ್ಲಿ ಎಲ್ಲ ವಾರ್ಡ್‍ಗಳಲ್ಲಿ 24 ತಾಸು ಕುಡಿಯುವ ಸುರಕ್ಷಿತವಾದ ಶುದ್ಧ ನೀರನ್ನು ಕೊಡುತ್ತೇವೆ. 2016ರಿಂದ ಬೆಳಗಾವಿ ಚುನಾಯಿತ ಪ್ರತಿನಿಧಿ ಇಲ್ಲದ ಕಾರಣ ರಸ್ತೆ ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿ ಮಾಡಲು ವಿಳಂಬವಾಗಿರುವುದು ಗಮನಕ್ಕೆ ಬಂದಿದೆ ಎಂದವರು ತಿಳಿಸಿದರು.

ಬೆಳಗಾವಿ ನಗರ ರಾಜ್ಯದಲ್ಲಿ ಎರಡನೇ ರಾಜಧಾನಿ. ಬೆಂಗಳೂರು ಬಿಟ್ಟರೆ ಬೆಳಗಾವಿಗೆ ಮಹತ್ವರ ಪಾತ್ರ ಇದೆ. ಈ ನಿಟ್ಟಿನಲ್ಲಿ ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿವಿಗೆ ಜಾಗ ನೀಡಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದರು.