ಚಾಮರಾಜನಗರ: ಸಂಚಾರಿ ಪೆÇಲೀಸರ ದುರ್ವರ್ತನೆ ಖಂಡಿಸಿ ಆಜಾದ್ ಹಿಂದೂ ಸೇನೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಾನಿರತರು ಟ್ರಾಫಿಕ್ ಪೆÇಲೀಸರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ತಹಸೀಲ್ದಾರ್ ವಿನೋದ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಂಚಾರಿ ಪೆÇಲೀಸರ ದುರ್ವರ್ತನೆ ವಿರೋಧಿಸಿ ಮನವಿ ಸಲ್ಲಿಸಲಾಯಿಯು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆಯ ಜಿಲಾಧ್ಯಕ್ಷ ಶಿವು ಮಾತನಾಡಿ, ಚಾಮರಾಜನಗರ ಟೌನ್ ವ್ಯಾಪ್ತಿಯಲ್ಲಿ ಸಂಚಾರಿ ಪೆÇಲೀಸರ ದುರ್ವರ್ತನೆ ಎಲ್ಲೆ ಮೀರಿದ್ದು, ದಂಡ ವಸೂಲಿ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ದಿನನಿತ್ಯದ ಕಾರ್ಯವಾಗಿದೆ. ಸಂಚಾರಿ ನಿಮಯಗಳ ಬಗ್ಗೆ ಮೊದಲು ಜನರಿಗೆ ಜಾಗೃತಿ ಮೂಡಿಸುವ ಬದಲು ಕೇವಲ ದಂಡ ವಸೂಲಾತಿ ಮಾಡುತ್ತಿದ್ದಾರೆ ಎಂದು ದೂರಿದರು.
ನಗರದ ಜಿಲ್ಲಾಸ್ಪತ್ರೆ, ಎದುರು, ಸಂತೇಮರಹಳ್ಳಿ ವೃತ್ತ, ಮಾರಿಗುಡಿ ಮುಂಭಾಗ ದಂಡ ವಸೂಲಾತಿ ಹೆಸರಿನಲ್ಲಿ ಬಡವರ ಮೇಲೆ ಶೋಷಣೆ ನಡೆಯುತ್ತಿದೆ. ಟೌನ್ ವ್ಯಾಪ್ತಿಯಲ್ಲಿ ಅನೇಕ ಸಂಚಾರಿ ನಿಮಯ ಮೀರಿದ್ದು, ಬೈಪಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುವುದು, ಜನವಾಸಿಸುವ ಪ್ರದೇಶಗಳಲ್ಲಿ ಸೈಲೆನ್ಸರ್ ತೆಗೆದು ದ್ವಿಚಕ್ರವಾಹನವನ್ನು ಚಲಿಸುತ್ತಿದ್ದು ಇವರ ಕಣ್ಣಿಗೆ ಕಾಣದಂತೆ ಕುಳಿತಿದ್ದಾರೆ. ಮೊನ್ನೆಯಷ್ಟೆ ಗಣಪತಿ ಹಬ್ಬದಲ್ಲಿ ಉದ್ದೇಶಪೂರ್ವಕವಾಗಿ ದೊಡ್ಡ ಅಂಗಡಿ ಬೀದಿ, ಮಾರ್ಕೇಟ್ ರಸ್ತೆ ಬಳಿ ಹಬ್ಬದ ಪ್ರಯುಕ್ತ ಬಂದಿದ್ದ ಸಾರ್ವಜನಿಕರಿಗೆ ಸಾಮಾನುಗಳ ಖರೀದಿಸಲು ಅವಕಾಶ ನೀಡದೇ ಯದ್ವಾತದ್ವಾ ದಂಡ ವಸೂಲಿ ಮಾಡಲಾಗಿದೆ. ಗುಂಡ್ಲುಪೇಟೆ ರಸ್ತೆ, ಗಾಳೀಪುರ ರಸ್ತೆಗಳಲ್ಲಿ ಯಾವುದೇ ವ್ಯಕ್ತಿಗಳ ಸಂಚಾರ ನಿಮಯ ಪಾಲಿಸುತ್ತಿಲ್ಲ. ದಾಖಲೆ ರಹಿತ ವಾಹನಗಳು, ಕಳ್ಳತನವಾದ ವಾಹನಗಳು, ಒಂದೇ ನೊಂದಣಿ ಸಂಖ್ಯೆ ಹೊಂದಿರುವ ವಾಹನಗಳು ಸಂಚಾರ ಮಾಡುತ್ತಿದ್ದರು ಅದನ್ನು ಏಕೆ ಪ್ರಶ್ನಿಸುತ್ತಿಲ್ಲ. ರಂಜಾನ್, ಬಕ್ರೀದ್ ಹಬ್ಬಗಳಿಗೆ ಮೂರರಿಂದ ನಾಲ್ಕು ಜನ ಕಣ್ಣ ಮುಂದೆ ಕುಳಿತು ಸವಾರಿ ಮಾಡಿದರು ಇವರು ಏಕೆ ಪ್ರಶ್ನಿಸುತ್ತಿಲ್ಲ. ಆದರೆ ಹಿಂದುಗಳ ಹಬ್ಬದ ದಿನದಂದು ದಂಡ ವಸೂಲಾತಿ ವಿಷಯದಲ್ಲಿ ಅಮಾಯಕ ಜನರ ಬಳಿ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದರು.
ಚಲಿಸುತ್ತಿರುವ ವಾಹನದಿಂದ ತಡೆಗಟ್ಟುವುದರಿಂದ ಅಪಾಯಗಳು ಸಂಭವಿಸುತ್ತದೆ. ಸರಿ ಆದರೆ ತಂತ್ರಜ್ಞಾನ ಬಳಸಿ ವಾಹನದ ಮಾಲೀಕರ ಮನೆಗೆ ನೋಟೀಸ್ ಕಳುಹಿಸಿ ದಂಡ ವಸೂಲಾತಿ ಮಾಡಬಹುದು.ಆದ್ದರಿಂದ ಸಂಚಾರಿ ಪೆÇಲೀಸರು ಈ ರೀತಿಯ ದುರ್ವರ್ತನೆಯನ್ನು ಬದಲಾವಣೆ ಮಾಡಿಕೊಂಡು ಸಾರ್ವಜನಿಜರೊಂದಿಗೆ ಉತ್ತಮ ಬಾಂದವ್ಯ ಹೊಂದುವಂತೆ ಪೆÇಲೀಸ್ ಇಲಾಖೆ ನೀಡಬೇಕು ಎಂದು ಸೇನೆಯ ಜಿಲ್ಲಾಧ್ಯಕ್ಷ ಒತ್ತಾಯಿಸಿದರು.