ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಲ್ಲಿ ಹುಲಿಯೊಂದು ಮೃತಪಟ್ಟಿದೆ.
ಸೆ. 14ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ, ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ
ಗಂಡತ್ತೂರು ಗಸ್ತಿನ ಸಿಬ್ಬಂದಿಗಳು ಗಸ್ತು ಕಾರ್ಯ ನಡೆಸುತ್ತಿದ್ದಾಗ ಆನೆ ತಡೆ ಕಂದಕದ ಪೊದೆಯೊಂದರಲ್ಲಿ
ಸುಮಾರು 5 ರಿಂದ 6 ವರ್ಷ ವಯಸ್ಸಿನ ಗಂಡು ಹುಲಿಯೊಂದು ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ.
ಮೃತ ಗಂಡು ಹುಲಿಯ ದೇಹವನ್ನು ಪರಿಶೀಲಿಸಿದಾಗ 3-4 ದಿನಗಳ ಹಿಂದೆ ಮುಳ್ಳುಹಂದಿಯನ್ನು ತಿನ್ನಲು
ಹೋಗಿ ಮುಳ್ಳಂದಿಯ ಜೊತೆ ಕಾದಾಡಿ, ಹುಲಿಯ ಮುಂಗಾಲಿನಲ್ಲಿ ಮುಳ್ಳು ಹಂದಿಯ ಮುಳ್ಳುಗಳು
ಚುಚ್ಚಿಕೊಂಡಿದ್ದು, ನಂತರ ಹೊರಬಂದು ಅದು ಸಣ್ಣ-ಪುಟ್ಟ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಲು
ಆನೆತಡೆ ಕಂದಕದ ಪೊದೆಯೊಂದರಲ್ಲಿ ಪ್ರಯತ್ನಿಸುತ್ತಿದ್ದಾಗ ಹುರುಳಿಗೆ ಸಿಲುಕಿ ಒದ್ದಾಡಿ ಮೆದುಳಿನ
ರಕ್ತ ಶ್ರಾವವಾಗಿ ಮೃತಪಟ್ಟಿರುತ್ತದೆ ಎಂಉ ಅರಣ್ಯ ಇಲಾಕೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಇಲಾಖಾ ಶ್ವಾನ ರಾಣವನ್ನು ಬರಮಾಡಿಕೊಳ್ಳಲಾಗಿರುತ್ತದೆ.
ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಮರಣೋತ್ತರ ಶವ ಪರೀಕ್ಷೆ ನಡೆಸಿ, ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಗುಂಡ್ಲುಪೇಟೆ ಉಪ ವಿಭಾಗ, ವನ್ಯಜೀವಿ ಪರಿಪಾಲಕರಾದ ಕೃತಿಕ ಆಲನಹಳ್ಳಿ, ಜೀವನ್ ಕೃಷ್ಣಪ್ಪ, ವನ್ಯಜೀವಿಪರಿಪಾಲಕರು ಹಾಗೂ ಸ್ಥಳೀಯ ಪಂಚಾಯಿತಿದಾರರ ಸಮಕ್ಷಮ ಮೃತ ಹುಲಿಯ ದೇಹವನ್ನು ಸುಡಲಾಯಿತು.