ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜನ್ಮ ದಿನ ಆಚರಿಸಿಕೊಳ್ಳೊ ದಿನದಂದೆ ಬಾಲಕಿಯೊಬ್ಬಳು ಹೆಣವಾದ ಘಟನೆ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕೆಂಗಾಕಿ ಗ್ರಾಮದ ಸಿದ್ದಲಿಂಗಸ್ವಾಮಿ ಎಂಬುವವರ ಪುತ್ರಿ ನಿವೇದಿತ (3) ಎಂಬಾಕೆ ಮೃತಳಾಜ ದುರ್ದೈವಿ.
ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದ್ದು, ನಿವೇದಿತಾ ತನ್ನ 3ನೇ ವರ್ಷದ ಹುಟ್ಟುಹಬ್ಬವನ್ನು ಬುಧವಾರ ಆಚರಿಸಿಕೊಳ್ಳಬೇಕಿತ್ತು. ಆಕೆ ಆಟ ಆಡುವಾಗ ಪಂಪ್ ಸೆಟ್ ಮುಟ್ಟಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ನಿವೇದಿತ ಸಾವನ್ನಪ್ಪಿದ್ದಾಳೆ.
ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.