ಅನಿರ್ದಿಷ್ಟವಧಿಗೆ ಮುಂದೂಡಿದ ಗಣಪತಿ ವಿಸರ್ಜನೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಆರ್.ಎಸ್.ಎಸ್. ಗಣಪ , ಪೊಲೀಸ್ ಗಣಪ ಎಂದೇ ಹೆಸರಾದ ಚಾಮರಾಜನಗರ ಭಕ್ತ ಮಂಡಳಿಯ ಗಣಪನ ವಿಸರ್ಜನ ಮಹೋತ್ಸವ ಅನಿರ್ದಿಷ್ಟವಧಿಗೆ ಮುಂದೂಡಿಕೆ ಆಗಿದೆ.

ಭಕ್ತಮಂಡಳಿಯು ಪ್ರತಿಷ್ಟಾಪನೆ ಮಾಡಲಾಗಿದ್ದ 90ನೇ ವರ್ಷದ ಭೂಚಕ್ರ ಗಣಪತಿಯು ಈ ಭಾರಿ ಸೆ. 20ರಂದು ವಿಸರ್ಜನೆ ಮಾಡಬೇಕಾಗಿತ್ತು.

ಆದರೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಗಣಪತಿ ಮೆರವಣಿಗೆಮಾರ್ಗ ಬದಲಾವಣೆ ಮಾಡಿದ್ದರ ಹಿನ್ನಲೆಯಲ್ಲಿ ಕೊರನೊ ಹೋಗೊವರೆಗೂ ಇಲ್ಲಿ ಇಟ್ಟು ಪೂಜೆ ಮಾಡಲಾಗುವುದು ಎಂದು ಭಕ್ತ ಮಂಡಲಿ ಅವರು ತಿಳಿಸಿದ್ದಾರೆ.

ಈ ಹಿಂದಿನಿಂದಲೂ ಇರೋ ಮಾರ್ಗದಲ್ಲೆ ಸಾಗಿ ವಿಸರ್ಜನೆಯನ್ನು ನಾವು ಮಾಡುತ್ತಿದ್ದೇವು. ಈ ವರರ್ಷ ಮಾರ್ಗ ಬದಲಾವಣೆ ಮಾಡಿದ್ದು, ಸರಿಯಲ್ಲ ಎಂದು ಭಕ್ತ ಮಂಡಳಿಯವರು ನಿರ್ಧರಿಸಿ ಮುಂದಿನ ಸೂಚನೆ ನಂತರ ಗಣಪತಿ ವಿಸರ್ಜನೆ ದಿನ ಗೊತ್ತು ಪಡಿಸಲಾಗುವುದು ಎಂದಿದ್ದಾರೆ.

ಇ ದೀಗ ಜಿಲ್ಲಾಡಳಿತ ಕೊವೆಡ್ ನಿಯಮಗಳನ್ನ ಅನುಸರಿಸಿ ವಿಸರ್ಜನೆ ಮಾಡಿ ಅಂತ ಹೇಳಿ ದಿಢೀರನೆ ಉಲ್ಟಾ ಹೊಡೆದ್ದರಿಂದ ಜಿಲ್ಲಾಧಿಕಾರಿಗಳು ವಿರುದ್ಧ ಹಿಂದೂಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.