ಈಜಲು ಹೋಗಿ ಬಾಲಕ ಸಾವು

ಚಾಮರಾಜನಗರ: ನಗರದ ಶಿವಗಂಗೆ ಕೆರೆಗೆ ಈಜಲು ತೆರಳಿದ್ದ ಇಬ್ಬರು ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ.

ಹೆಗ್ಗೋಠಾರ ಗ್ರಾಮದ ರಾಜು ಎಂಬುವವರ ಪುತ್ರ ವಿನೋದ್ (17) ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ವಿನೋದ್ ಹಾಗೂ ಆತನ ಸ್ನೇಹಿತ ಬೆಂಡರವಾಡಿ ಸಮೀಪವಿರುವ ಶಿವಗಂಗೆ ಕೆರೆಗೆ ಈಜಲು ತೆರಳಿದ್ದರು. ಈ ನಡುವೆ ವಿನೋದ್ ಈಜಲು ಹರಸಾಹಸ ಪಟ್ಟರೂ ಬದುಕುಳಿಯದೆ ಸಾವನ್ನಪ್ಪಿದ್ದಾನೆ.

ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.