ಕುಡುಕರ ತಾಣವಾದ ಹಳೆಯ ಪಟ್ಟಣ ಪೊಲೀಸ್ ಠಾಣೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಕಟ್ಟಡಗಳು ಮದ್ಯ ಸೇವನೆಯ ಅನಧಿಕೃತ ಕುಡುಕರ ತಾಣವಾಗಿದೆ.

ಜಿಲ್ಲೆಯ ಬಹುತೇಕ ಠಾಣಾ ವ್ಯಾಪ್ತಿ ಸಮೀಪ, ಠಾಣೆಯ ಹಳೆಯ ಕಟ್ಟಡಗಳು ಜೂಜಾಟ, ಕುಡುಕರ ತಾಣವಾಗಿದೆ.

ಚಾಮರಾಜನಗರ ಉಪವಿಭಾಗದ ವ್ಯಾಪ್ತಿಗೆ ಹೊಂದಿಕೊಂಡಂತೆ ಇರೊ ಬಹುತೇಕ ಠಾಣಾಗಳ ಸಮೀಪ ಜೂಜಾಟ ನಡೆಯುತ್ತದೆ ಎಂಬುದರ ಬಗ್ಗೆ ಡಿವೈಸ್ಪಿ ಗಮನಕ್ಕೆ ತಂದಾಗ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದಿದ್ದರು. ಅದರಂತೆ ನಂತರದ ಸ್ವಲ್ಪ ದಿನಗಳ ಕಾಲ ನಿಂತಿತ್ತು. ಆದರೀಗ ಠಾಣೆಯ ಹಳೆಯ ಕಟ್ಟಡ ಜೂಜಿನ ಕೇಂದ್ರ, ಕುಡುಕರ ತಾಣವಾಗಿದೆ.

ತಾಲ್ಲೋಕು ಪಂಚಾಯ್ತಿಗೆ ಸೇರಿದ ಹಳೆ ಪೊಲೀಸ್ ಠಾಣೆ ಕಟ್ಟಡದಲ್ಲಿ ಗಿಡ ಮರಗಳು ಬೆಳೆದುಕೊಂಡಿದೆ.ಮತ್ತೊಂದೆಡೆ ಮದ್ಯದ ಬಾಟಲ್ ಯತೇಚ್ಚವಾಗಿ ಇರುವುದು ನೋಡಿದರೆ ಸಾರ್ವಜನಿಕರು ಕಟ್ಟಡದೊಳಗೆ ಬಂದು ಕುಡಿಯಲು ಭಯಪಡೊವಾಗ ಇಲ್ಲಿ ಪೊಲೀಸರೆ ಕುಡುಕರಾದಾರಾ ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿಸಿದೆ.

ಚಾಮರಾಜನಗರ ಜಿಲ್ಲಾ ಎಸ್ಪಿ ದಿವ್ಯ ಅವರ ಅವದಧಿಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಯಾವೊಬ್ಬ ಪೊಲೀಸ್ ಅದಧಿಕಾರಿಗಳ ಮೇಲೆ ಕ್ರಮವಹಿಸದೆ ಮೌನವಾಗಿರುವುದು ಇವರ ನಿರ್ಲ್ಯಕ್ಷತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು.