ಮೈಸೂರು: ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಗುರುವಾರ ಆರೋಪಿಗಳ ಗುರುತು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದಳು.
ಮೈಸೂರು ಜೈಲಿನಲ್ಲಿ ನಡೆದ ಆರೋಪಿಗಳ ಗುರುತು ಪತ್ತೆ ಕಾರ್ಯದಲ್ಲಿ ಸಂತ್ರಸ್ತೆ ಭಾಗಿಯಾಗಿ, ಅತ್ಯಾಚಾರ ಎಸಗಿದ ವ್ಯಕ್ತಿಗಳನ್ನು ಈ ವೇಳೆ ಗುರುತು ಹಿಡಿದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಳೆ.
ಈ ಸಂದರ್ಭದಲ್ಲಿ 6 ಆರೋಪಿಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಅತ್ಯಾಚಾರ ಎಸಗಿದವರು ಇವರೆ ಎಂದು ಆಕೆ ಹೇಳಿದಳು.
ಮೈಸೂರು ಜೈಲಿನಲ್ಲಿ ನಡೆದ ಐಡೆಂಟಿಫಿಕೇಷನ್ ಪರೇಡ್ 4 ಗಂಟೆಗಳ ಕಾಲ ನಡೆಯಿತು. ಎರಡು ವಿಡಿಯೋ ಕ್ಯಾಮಾರಾಗಳನ್ನು ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳಲಾಯಿತು.
ತಹಶೀಲ್ದಾರರು ಹಾಗೂ ಪೆÇೀಲಿಸ್ ತನಿಖಾಧಿಕಾರಿ ಮುಂದೆ ಐಡೆಂಟಿಫಿಕೇಷನ್ ಪರೇಡ್ ನಡೆಯಿತು.
ಯುವತಿಯ ಪೆÇೀಷಕರು ಕೂಡ ಈ ವೇಳೆ ಇದ್ದರು.
ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದ ತಿಳಿಸಿದ್ದಳು. ಆದರೆ ಈಗ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಬುಧವಾರ 164 ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ. ಗುರುವಾರ ಮೈಸೂರು ಜೈಲಿನಲ್ಲಿ ನಡೆದ ಆರೋಪಿಗಳ ಗುರುತು ಪತ್ತೆ ಕಾರ್ಯದಲ್ಲಿ ಕೂಡ ಭಾಗಿಯಾಗಿದ್ದಳು.