ಇಂದಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ವರು ನಮ್ಮನ್ನು ಅಗಲಿ ಒಂದು ವರ್ಷವಾಯಿತು ಅವರಿಗೆ ನಮ್ಮ ನುಡಿ ನಮನ.
ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಬಹುಶಃ ಎಸ್ ಪಿ ಬಿ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳು ಇರಲಿಕ್ಕಿಲ್ಲವೇನೊ? ಸಂಗೀತ ದಿಗ್ಗಜರು, ಸಹ ಗಾಯಕರ ಬಾಯಲ್ಲಿ ಬಾಲು, ಬಾಲು ಸರ್, ಬಾಲುಗಾರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.
ಕಳೆದ ವರ್ಷ ಆಗಸ್ಟ್ 5ರಂದು ಕೊರೋನಾ ಪಾಸಿಟಿವ್ ಬಂದು ಚೆನ್ನೈಯ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನುರಿತ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಆಗಾಗ ಅವರ ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡುಬರುತ್ತಿತ್ತು.
ಕೊರೋನಾ ಗೆದ್ದಿದ್ದರು, ಆದರೆ ಸಾವನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದ್ದು.
ಎಸ್.ಪಿ.ಬಿಯವರು 1946ರ ಜೂನ್ 4ರಂದು ಈಗ ಆಂದ್ರಪ್ರದೇಶದಲ್ಲಿರುವ ಕೋನಂಪೇಟೆಯಲ್ಲಿ ಜನಿಸಿದ ಎಸ್.ಪಿ.ಬಿಯವರ ತಂದೆ ಸಾಂಬಶಿವನ್ ಹರಿಕಥಾ ವಿದ್ವಾಂಸರು. ಸೋದರಿಬ್ಬರು ಸಂಗೀತ ಕಲಿಯುತ್ತಿದ್ದರಿಂದ ಆ ಹಾದಿ ಬೇಡ ಎಂದು ಎಸ್.ಪಿ ವಾಯಲಿನ್ ಕಲಿಯಲು ಹೋಗಿದ್ದೂ ಉಂಟು. ತಂದೆಯ ಆಸೆಯಂತೆ ಇಂಜಿನಿಯರ್ ಆಗಲು ಅನಂತ ಪುರಂನ ಜೆ.ಎನ್.ಟಿ.ಸಿ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿರುವಾಗ ಟೈಫಾಯ್ಡ್ ಕಾಡಿತು. ಪರೀಕ್ಷೆಗೆ ಹಾಜರಾಗಲು ಆಗಲೇ ಇಲ್ಲ. ಇದರಿಂದ ಒಂದು ವರ್ಷ ವ್ಯರ್ಥವಾಗುವುದು ಎಂದು ಚಿಂತಿತರಾಗಿದ್ದಾಗ ಮದ್ರಾಸಿನ ಇನ್ಸ್‍ಟ್ಯೂಟ್ ಅಫ್ ಇಂಜಿನಿಯರ್ಸ್ ನಲ್ಲಿ ಕ್ಯಾರಿ ಓವರ್ ಇರುವುದು ತಿಳಿದು ಅಲ್ಲಿಗೆ ಸೇರಿದರು. ಅದು ಅವರ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಲ್ಲಿ ಮೇರು ಗಾಯಕನಾಗಿರುವುದನ್ನು ಗುರುತಿಸಿದವರು ಆಗ ಅವಕಾಶಗಳನ್ನು ಅರಸುತ್ತಿದ್ದ ಇಳಯರಾಜ. ಇಬ್ಬರೂ ಇನ್ನೂ ಕೆಲವು ಗೆಳಯರ ಜೊತೆ ಸೇರಿ ಸ್ವರ ಸಂಗಮ ಎನ್ನುವ ಸಂಗೀತ ತಂಡ ಕಟ್ಟಿದರು.
ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇವರು ಜೂನ್ 4, 1946ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ನಲ್ಲಿ ಜನಿಸಿದ್ದಾರೆ. ಹರಿಕಥೆ ಹೇಳುತ್ತಿದ್ದ ಇವರ ತಂದೆ ಎಸ್.ಪಿ.ಸಾಂಬಮೂರ್ತಿಯವರೇ ಇವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು.
1966ರ ಫೆಬ್ರವರಿ 17 ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ಸಂಯೋಜಿಸಿದ್ದ ಸ್ಪರ್ಧೆಯಲ್ಲಿ ತಾವೇ ರಚಿಸಿ ಸ್ವರ ಸಂಯೋಜಿಸಿದ್ದ ರಾಗಮು ಅನುರಾಗಮು ಎನ್ನುವ ಗೀತೆಯನ್ನು ಹಾಡಿದರು. ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಘಂಟಸಾಲ ಮತ್ತು ಕೋದಂಡ ಪಾಣಿ ಇಬ್ಬರೂ ಎಸ್.ಪಿ.ಬಿಯವರ ಕಂಠಸಿರಿಗೆ ಬೆರಗಾದರು. ಅದರಲ್ಲಿಯೂ ಕೋದಂಡಪಾಣಿ ತಮ್ಮ ಸಂಗೀತ ನಿರ್ದೇಶನದ ಚಿತ್ರದ ಮೂಲಕವೇ ಎಸ್.ಪಿ.ಬಿಯವರನ್ನು ಚಿತ್ರರಂಗಕ್ಕೂ ತಂದರು.
ಶಾಸ್ತ್ರೀಯ ಸಂಗೀತವನ್ನು ಕಲಿತಿಲ್ಲ ಎನ್ನುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಿಂಜೆರಿಕೆಯನ್ನು ನಿವಾರಿಸಿದವರು ಕೆ. ವಿಶ್ವನಾಥ್. ಶಂಕರಾಭರಣಂ ಚಿತ್ರಕ್ಕೆ ಹಾಡಲು ಕೋರಿದಾಗ ಎಸ್.ಪಿ.ಬಿಯವರೇ ಹಿಂದೆಗೆದಿದ್ದರು. ಆದರೆ ವಿಶ್ವನಾಥ್ ಇಟ್ಟಿದ್ದ ಅಚಲ ವಿಶ್ವಾಸದಿಂದ ಅಮೋಘ ಗೀತೆಗಳು ಮೂಡಿ ಬಂದವು ಮಾತ್ರವಲ್ಲ ರಾಷ್ಟ್ರಪ್ರಶಸ್ತಿ ಕೂಡ ದೊರಕಿತು.
ಅವರ ಕುರಿತು ಇಂತಹದೇ ವಿಶ್ವಾಸ ಇಟ್ಟಿದ್ದ ಬಾಲಚಂದರ್ ಏಕ್ ದೂಜೆ ಕೇ ಲಿಯೇ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ಕೂಡ ಹಾಡಿಸಿದರು. ವಿಶೇಷವೆಂದರೆ ಈ ಚಿತ್ರ ಕೂಡ ಎಸ್.ಪಿ.ಬಿಯವರಿಗೆ ರಾಷ್ಟ್ರಪ್ರಶಸ್ತಿಯ ಗೌರವವನ್ನು ತಂದು ಕೊಟ್ಟಿತು. ಭಾರತೀಯ ಗಾಯಕರಲ್ಲೇ ಅತಿ ಹೆಚ್ಚು ಎಂದರೆ ಆರು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಬಾಲಸುಬ್ರಹ್ಮಣ್ಯಂ ಅದೆಲ್ಲವನ್ನೂ ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ಪಡೆದಿದ್ದಾರೆ. ಅವುಗಳಲ್ಲಿ ಕನ್ನಡದ ಗಾನಯೋಗಿ ಪಂಚಾಕ್ಷರಿ ಗವಾಯಿ ಕೂಡ ಸೇರಿದೆ.
22 ಭಾಷೆಗಳಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ ಎನ್ನುವುದು ಮಾತ್ರ ವಿಶೇಷವಲ್ಲ ಆ ಭಾಷೆಗಳನ್ನೆಲ್ಲಾ ಕಲಿತು ಹಾಡಿದ್ದಾರೆ ಎನ್ನುವುದು ವಿಶೇಷ.
ಹಾಗೆ ನೋಡಿದರೆ ಅವರು ಅಸಾಧಾರಣ ಕಲಿಕೆಯ ಹಸಿವು ಇರುv ವ್ಯಕ್ತಿ. ರಂಜಿನಿ ಎನ್ನುವ ಹಿಂದಿ ಚಿತ್ರದಲ್ಲಿ ಬಳಕೆಯಾದ ಮಧ್ಯಪ್ರದೇಶದ ಬುಡಕಟ್ಟು ಭಾಷೆ ಜಗಪುರಿಯನ್ನು ಕುತೂಹಲದಿಂದಲೇ ಕಲಿತ ಎಸ್.ಪಿಬಿ ಆ ಭಾಷೆ ಕಲಿತು ಹಾಡಿದ್ದು ಮಾತ್ರವಲ್ಲ ಬುಡಕಟ್ಟು ಜನರನ್ನು ಬಳಸಿ ಒಂದು ಟಿ.ವಿ. ಕಾರ್ಯಕ್ರಮವನ್ನು ರೂಪಿಸಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಮಧ್ಯ ಪ್ರದೇಶದಲ್ಲಿ ಜನಿಸಿದ ಗಾಯಕರಿಗೇ ಆ ಭಾಷೆ ಅಪರಿಚಿತ.
1981ರ ಫೆಬ್ರವರಿ 8ರಂದು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಅವರು ಒಂದೇ ದಿನದಲ್ಲಿ 21 ಕನ್ನಡ ಚಿತ್ರಗೀತೆಗಳನ್ನು ಧ್ವನಿಮುದ್ರಿಸಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. ಹೀಗೆ ಒಂದೇ ದಿನದಂದು ಅವರು ತಮಿಳಿನ 18, ತೆಲುಗಿನ 14 ಗೀತೆಗಳನ್ನು ಅವರು ಧ್ವನಿಮುದ್ರಿಸಿದ್ದಾರೆ.
ಇವರ ಧ್ವನಿಯ ಮೋಡಿ ಎಂ.ಜಿ.ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು. ಹಿಂದಿಯಲ್ಲಿ ಏಕ್ ದೂಜೇ ಕೆ ಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಇವರು ಬೆನ್ನೆಲುಬಾಗಿದ್ದರು.
ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎಸ್ ಪಿ ಬಿ ಅವರು ಹಾಡಿರುವ ಹಾಡುಗಳ ಸಂಖ್ಯೆ 45000ಕ್ಕೂ ಹೆಚ್ಚು. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಇವರೊಬ್ಬರೇ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ.
ದಕ್ಷಿಣ ಭಾರತದ ತೆಲುಗು, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದಾರೆ.
ವಿವಿಧ ಭಾಷೆಗಳ ಪರಿಧಿಯಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಎಸ್.ಪಿ.ಬಿ ಅವರಿಗೆ ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ. 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ. 68 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 112 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಎದೆ ತುಂಬಿ ಹಾಡಿದೆನು ಎಂಬ ಕಾರ್ಯದ ಮೂಲಕ ಮನೆ ಮಾತದರು ಎಸ್ಪಿಬಿ. ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯದರು ತಮ್ಮ ಟಿ.ವಿ. ಕಾರ್ಯಕ್ರಮಗಳ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಬೆಳಕನ್ನು ಅವರು ತುಂಬಿದ್ದಾರೆ.
ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ.
ದಣಿವರಿಯದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂವರು ನಮ್ಮನೆಲ್ಲಾ ಅಗಲಿರಬಹುದು ಅವರ ಹಾಡುಗಳ ಮೂಲಕ ಸಂಗೀತ ಪ್ರಿಯರ ಮನ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ.