ಮೈಸೂರು: ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ ಯುವತಿಯನ್ನು ವಿಚಾರಿಸಿದ ಪೆÇಲೀಸ್ ಕಾನ್ಸಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗಾಯಗೊಂಡಿರುವ ಕಾನ್ಸಟೇಬಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು ನಜರ್ ಬಾದ್ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುರಳಿ ಎಂಬವರೇ ಹಲ್ಲೆಗೊಳಗಾದವರು.
ನಜರ್ ಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಪಾರ್ಕ್ ಒಂದರಲ್ಲಿ ಯುವಕ ಯುವತಿ ಕುಳಿತಿದ್ದರು. ಅವರು ಹಲವು ಸಮಯದಿಂದ ಕುಳಿತಿದ್ದನ್ನು ಮುರಳಿ ಗಮನಿಸಿ ಅವರ ಬಳಿ ತೆರಳಿ ವಿಚಾರಿಸಿದರು ಎನ್ನಲಾಗಿದೆ.
ಈ ವೇಳೆ ಕರ್ತವ್ಯದಲ್ಲಿದ್ದ ಪೆÇಲೀಸ್ ಕಾನ್ಸಟೇಬಲ್ ಮುರಳಿ ಅವರ ಮೇಲೆಯೇ ಹಲ್ಲೆ ನಡೆದಿದೆ.
ಕಾನ್ಸಟೇಬಲ್ ಮೇಲೆ ಹಲ್ಲೆ ನಡೆಸಿದವರು ಪರಾರಿ ಆಗಿದ್ದಾರೆ.
ಈ ಕುರಿತು ನಜರ್ ಬಾದ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.