ದಾವಣಗೆರೆ: ನಾನು ಚಣ್ಣಾ ಹಾಕಿಕೊಳ್ಳುವಾಗ ಪೆಟ್ರೋಲ್ ಹಾಗೂ ಬೇರೆ ವಸ್ತುಗಳ ಬೆಲೆ ಕಮ್ಮಿ ಇತ್ತು, ಅದ್ರೇ ಇದೀಗ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.
ದಾವಣಗೆರೆಯಲ್ಲಿ ಸೋಮವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದಿನ ಕಳೆದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತೆ ಎಂದು ಉಡಾಫೆ ಉತ್ತರವನ್ನು ಅವರು ನೀಡಿದರು.
ಅದು ವಾತಾವರಣ ಹೇಗಿರುತ್ತೇ ಹಾಗೆ ಹೋಗ್ತಾ ಇರುತ್ತೇ ಎಂದು ಬೆಲೆ ಏರಿಕೆ ಕುರಿತು ಸಂಸದ ಸಿದ್ದೇಶ್ವರ್ ಮತ್ತೇ ಉಡಾಫೆ ಉತ್ತರ ನೀಡಿದರು.
ಟ್ಯಾಕ್ಸ್ ಜಾಸ್ತಿ ಆಗಿದೆ ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಕೈ ಮುಗಿದು ಸಮಸದ ಸಿದ್ದೇಶ್ವರ್ ಹೊರಟು ಹೋದರು.