ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದ್ದು, ಅ. 4ರ ನಂತರ ಮತ್ತೆ ವರ್ಗಾವಣೆ ಪ್ರಾರಂಭಗೊಳುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ 4 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಪರಿಣಾಮ ಮೂರ್ಖ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದೆ ಎಂದರು.
ಈ ಹಿಂದೆಯೇ ಶಿಕ್ಷಕರ ವರ್ಗಾವಣೆಯನ್ನು ಸುಗ್ರಿವಾಜ್ಞೆ ಮೂಲಕ ಮಾಡಬೇಕಿತ್ತು. ಆದರೆ ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮೂರು ತಿಂಗಳು ವಿಳಂಬವಾಗಿದೆ. ಇದೀಗ ಈ ವಿಷಯ ಕೋರ್ಟ್ ನಲ್ಲಿದ್ದು ಅ. 4ರಂದು ವಿಚಾರಣೆ ಇದ್ದು, ಆ ಬಳಿಕೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದವರು ತಿಳಿಸಿದರು.
ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಅದರಂತೆ ಸರ್ಕಾರ 176 ಜನರ ಪಟ್ಟಿ ಮಾಡಿದ್ದು ಅವರಿಗೆಲ್ಲಾ ಪರಿಹಾರ ದೊರೆಯಲಿದೆ ಎಂದು ಹೊರಟ್ಟಿ ಹೇಳಿದರು.
ಇನ್ನು 1ರಿಂದ 5ನೇ ತರಗತಿ ಪ್ರಾರಂಭ ಕುರಿತು ಮಾತನಾಡಿದ ಅವರು, ಒಂದರಿಂದ ಅಲ್ಲಾ ಸದ್ಯ 3, 4, 5ನೇ ತರಗತಿ ಪ್ರಾರಂಭ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಪ್ಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇನೆ ಎಂದರು.