ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ
ಪಿಎಸ್‍ಐಯೊಬ್ಬರು ಸರ್ಕಾರದ ಖಜಾನೆಗೆ ಲಕ್ಷಾಂತರ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಚಾಮರಾಜನಗರ ಎಸ್ಪಿ ಕಚೇರಿಯಲ್ಲಿ ವೈರ್ ಲೆಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವೆಂಕಟರಾಜು ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ದೀಪದ ಕೆಳಗೆ ಕತ್ತಲು ಎನ್ನುವ ಹಾಗೇ ಎಸ್ಪಿ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಹೊಗೆಯಾಡುತ್ತಿದೆ.
ಏನಿದು ಆರೋಪ?
ಪೊಲೀಸ್ ಇಲಾಖೆಗೆ ಸೇರಿದ ಸಿಬ್ಬಂದಿ ಹೆಚ್ ಆರ್ ಎ ಪಡೆದು ಲಕ್ಷಾಂತರ ರೂ. ವಂಚಿಸಿರುವ ಅರೋಪ ಕೇಳಿ ಬಂದಿದೆ.
ಪೆÇಲೀಸ್ ಇಲಾಖೆಗೆ ಸೇರಿದ ಸಿಬ್ಬಂದಿ ತಮ್ಮ ಪತ್ನಿಗೆ ಆರೋಗ್ಯ ಇಲಾಖೆಯಿಂದ ನೀಡಿರುವ ವಸತಿ ಗೃಹದಲ್ಲಿ ತಾವು ಮತ್ತು
ತಮ್ಮ ಪತ್ನಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದುಕೊಂಡು, ಪೆÇಲೀಸ್ ಇಲಾಖೆಯಿಂದ ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯರೊಬ್ಬರು ಮಾಹಿತಿ ಕೇಳಿರುವುದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರದಲ್ಲಿ ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಇಬ್ಬರೂ ಒಂದೇ ಸ್ಥಳದಲ್ಲಿ ವಾಸವಾಗಿದ್ದು, ಸರ್ಕಾರಿ ವಸತಿ ಗೃಹವನ್ನು ಈ ಇಬ್ಬರೂ ಅಧಿಕಾರಿಗಳು ಹಂಚಿಕೆ ಮಾಡಿಕೊಂಡಿದ್ದು, ಇಬ್ಬರೂ ಸರ್ಕಾರದ ಬೊಕ್ಕಸದಿಂದ ಬಾಡಿಗೆ ಹಣ
ಪಡೆಯುತ್ತಿರುವ ಬಗ್ಗೆ ಮಾಹಿತಿ ಕೇಳಿ ವಿಧಾನ ಸದಸ್ಯರೊಬ್ಬರು ಜಿಲ್ಲಾ ನಿಯಂತ್ರಣ ಕೊಠಡಿಗೆ ಪತ್ರ ರವಾನೆ ಮಾಡಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ನಿಗೆ ನೀಡಿರುವ ವಸತಿ ಗೃಹ ಸಂಖ್ಯೆ-1ರಲ್ಲಿಯೇ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐ ಕೂಡಾ ವಾಸವಾಗಿದ್ದು, ಜಾಣ ಪತಿ ತನ್ನ ಪತ್ನಿಗೆ ನೀಡಿರುವ ವಸತಿ ಗೃಹಕ್ಕೆ ತನ್ನ ಇಲಾಖೆಯಿಂದಲೂ ಸುಮಾರು ಎರಡು ವರ್ಷದಿಂದಲೂ ಬಾಡಿಗೆ ಭತ್ಯೆ ಪಡೆದಿರುವುದು ಬೆಳಕಿಗೆ ಬಂದಿದೆ.
ಹಿಂದೆ ಇದ್ದ ದಕ್ಷ ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ ಜೈನ್ ಅವಧಿಯಲ್ಲಿ ಈ ಹಗರಣ ಪತ್ತೆ ಮಾಡಿ, ರಿಕವರಿ ಮಾಡಲು ಆದೇಶಿಸಿದ್ದರು.
ಹಣ ಪಾವತಿಸಲು ಬೆಚ್ಚಿ ಬಿದ್ದ ಅಧಿಕಾರಿ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡು ಹೋದವರು ಒಂದೂವರೆ ವರ್ಷದ ನಂತರ ಬಂದು ಚಾಮರಾಜನಗರದಲ್ಲೆ ಕೆಲಸ ಮಾಡಲು ಪ್ರಾರಂಭಿಸಿದರು.
ಹಾಲಿ ಎಸ್ಪಿ ದಿವ್ಯ ಅವರೂ ಇದೆಲ್ಲ ಗೊತ್ತಿದ್ದರೂ ನಮಗೇಕೆ ಎಂದು ಮೌನ ವಹಿಸಿ ಸುಮ್ಮನೆ ಕುಳಿತಿರುವುದು ವಿಪರ್ಯಾಸವೆ ಸರಿ.
ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿಯೇ ಇಂತಹ ಹಗರಣ ನಡೆಯುತ್ತಿದ್ದರೂ ಹಿಡಿಯಲಾಗದ ಪೆÇಲೀಸ್ ಇಲಾಖೆ ಮತ್ತು
ಈ ಕಛೇರಿಯ ಆಡಳಿತ ಅಧಿಕಾರಿಗಳು ಗೊತ್ತಿದ್ದು ಸುಮ್ಮನಿದ್ದರೋ ಅಥವಾ ಇದು ಗೊತ್ತಾಗದಿರುವಷ್ಟು ಮುಗ್ಧರೋ ತಿಳಿಯದು.
ಇದೇನೇದರೂ ಚರ್ಚೆಗೆ ಬಂದರೆ ಚಾಮರಾಜನಗರ ಜಿಲ್ಲೆಯ ಪೆÇಲೀಸ್ ಇಲಾಖೆಯ ಬಗ್ಗೆ ಅಗೌರವ ಮೂಡುವುದಿಲ್ಲವೇ. ಶಿಸ್ತಿನ ಇಲಾಖೆಯೆಂದೇ ಹೆಸರಾಗಿರುವ ಇಲಾಖೆಯಲ್ಲಿ ಇಂತಹ ಅಶಿಸ್ತಿನ ಘಟನೆ ನಡೆದಿರುವುದು ನಾಚಿಕೆಗೇಡು. ಇದು ಒಂದು ಉದಾಹರಣೆಯಷ್ಟೇ ಇಂತಹ ಹಲವಾರು ದೋಖ ಪ್ರಕರಣಗಳು ಚಾಂರಾಜನಗರ ಜಿಲ್ಲೆಯಲ್ಲಿ ನಡೆಯುತ್ತವೆ. ಈ ಬಗ್ಗೆ ಕೇಳುವ ಗೋಜಿಗೆ ಯಾವ ಪೆÇಲೀಸರು ಹೋಗುವುದಿಲ್ಲ. ಎಲ್ಲರದ್ದೂ ಜಾಣ ನಡೆ. ನಾಳೆ ನನಗೂ ಈ ಸ್ಥಿತಿ ಬರಬಹುದು ನಮ್ಮನ್ನು
ಯಾರು ಕೇಳಬಾರದು ಅದಕ್ಕೆ ನಾವು ಯಾರನ್ನೂ ಕೇಳುವುದು ಬೇಡ ಎಂಬ ಮನಸ್ಥಿತಿಗೆ ಬಂದಿದ್ದಾರೆ ಅಧಿಕಾರಿಗಳು ಎಂದನಿಸುತ್ತದೆ.