ಕೆಸರುಗದ್ದೆಯಾದ ಕರಿನಂಜನಪುರದ ಮುಖ್ಯರಸ್ತೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ರಸ್ತೆ ಕಾಮಗಾರಿ ಮಾಡ್ತೀವಿ ಅಂತ ರಸ್ತೆ ಅಗೆದು ಹಾಕಿದರು, ವರುಣರಾಯ ಮುನಿಸಿಕೊಂಡಿದರ ಪರಿಣಾಮ ರಸ್ತೆ ಕೆಸರುಗದ್ದೆಯಾಗಿದೆ.

ಚಾಮರಾಜನಗರ ಮುಖ್ಯರಸ್ತೆಯಿಂದ ಕರಿನಂಜನಪುರಕ್ಕೆ ಹೋಗೊ ಮಾರ್ಗಮಧ್ಯೆ ಇರೊ ಒಂದೂ ಕಿ.ಮಿ.ವ್ಯಾಪ್ತಿವರೆಗೆ ರಸ್ತೆ ಕೆಸರುಗದ್ದೆಯಾಗಿದೆ.

ರಸ್ತೆ ಮಾಡ್ತೇವೆ, ಚರಂಡಿ ಮಾಡ್ತೇವೆ ಅಂತ ಕೆಲವು ಮನೆ ಹೊಡೆದು ಹಾಕಿದರು. ರಸ್ತೆ ಕಿತ್ತು ಹಾಕಿ ಆರು ತಿಂಗಳಾದರೂ ಗುತ್ತಿಗೆದಾರ ಮುಖ ಮಾಡಿಲ್ಲ. ನಗರಸಭಾ ಆಯುಕ್ತರಿಗೂ ದೂರು ಕೊಟ್ಟರೂ ಪ್ರಯೋಜನವಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಗರಸಭಾ ಆಯುಕ್ತರು ಕೂಡಲೆ ಇತ್ತ ಧಾವಿಸಿ ತ್ವರಿತವಾಗಿ ರಸ್ತೆ, ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.