ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಸ್ವಾತಂತ್ರಕ್ಕಾಗಿ ಅನೇಕ ರೀತಿಯಲ್ಲಿ ಚಳುವಳಿಗಳು ನಡೆಯುತ್ತಿದ್ದ ಸಂದರ್ಭ. ಬ್ರಿಟೀಷರಿಗೆ ತ್ರಿವರ್ಣ ಧ್ವಜ ಕಂಡರೆ ಭಾರೀ ಕೋಪ. ಅಲಹಾಬಾದಿನಲ್ಲಿ ಸತ್ಯಾಗ್ರಹಿಗಳು ಎತ್ತರವಾದ ಗಡಿಯಾರ ಗೋಪುರದ ಮೇಲೆ ಧ್ವಜ ಹಾರಿಸಬೇಕೆಂದು ಸಂಕಲ್ಪಿಸಿದರು. ಇದನ್ನು ತಿಳಿದ ಪೆÇಲೀಸರು ಗೋಪುರದ ಸುತ್ತ ಬಲವಾದ ಕಾವಲು ಹಾಕಿದರು.
ಸ್ವಲ್ಪ ಹೊತ್ತಿಗೆ ಅಲ್ಲಿಂದ ಕುದುರೆಗಾಡಿ ಬಂದಿತ್ತು. ಅದರ ಎರಡೂ ಕಡೆ ಬಟ್ಟೆಯಿಂದ ಮುಚ್ಚಲಾಗಿತ್ತು. ಪೆÇೀಲೀಸರು ಗಾಡಿಯನ್ನು ತಡೆದು ಪ್ರಶ್ನಿಸಿದರು. ಗಾಡಿಯೊಳಗೆ ‘ಘೋಷಾ’ ಹೆಂಗಸರಿದ್ದಾರೆ ಎಂಬ ಉತ್ತರ ಕೇಳಿ ಅದನ್ನು ಪರೀಕ್ಷಿಸದೆ ಹಾಗೆಯೇ ಬಿಟ್ಟರು.
ಕೆಲವೇ ನಿಮಿಷದಲ್ಲಿ ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆ ಗಡಿಯಾರದ ಗೋಪುರದ ಕಡೆಯಿಂದ ಕೇಳಿ ಬಂದಿತು. ಪೆÇೀಲೀಸರು ದಿಗ್ಭ್ರಮೆಯಿಂದ ಅತ್ತ ನೋಡಿದರು. ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿತ್ತು. ಅದನ್ನು ಸಾಧಿಸಿದವರು ಭಾರತದ ದ್ವಿತೀಯ ಪ್ರಧಾನ ಮಂತ್ರಿಗಳಾಗಿ ಕೀರ್ತಿಶೇಷರಾದ ಲಾಲ್ ಬಹದ್ದೂರ್ ಶಾಸ್ತ್ರಿಗಳು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹುಟ್ಟಿದ್ದು 1904ನೇ ಅಕ್ಟೊಬರ್ 2ರಂದು, ಉತ್ತರ ಪ್ರದೇಶದ ಬನಾರಸ್ನಿಂದ ಕೇವಲ 11ಕಿ.ಮಿ ದೂರದಲ್ಲಿರುವ ಮೊಘಲ್ ಸರಾಯ್ ನಲ್ಲಿ ಇವರ ತಂದೆ ಶಾರದಾ ಪ್ರಸಾದ್, ತಾಯಿ ದುಲಾರಿ ದೇವಿ.
ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಶಾಲೆಯ ಅಧ್ಯಾಪಕರಾಗಿದ್ದರು. ತಾಯಿ ರಾಮ್ ದುಲಾರಿ. 2ನೇ ವಯಸ್ಸಿನಲ್ಲಿದ್ದಾಗ ಶಾಸ್ತ್ರಿಯವರು ತಂದೆಯನ್ನು ಕಳೆದುಕೊಂಡು ತಾಯಿಯ ಜೊತೆ ಅಣ್ಣನ ಮನೆಯಲ್ಲಿ ಬೆಳೆದರು.
ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಚಿಕ್ಕಪ್ಪ ರಘುನಾಥ ಪ್ರಸಾದ್ ಇವರ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾಯಿಯಿಂದ ರಾಮಾಯಣ ಮಹಾಕಾವ್ಯಗಳ ಅಧ್ಯಯನ ಶಾಸ್ತ್ರಿಯವರಿಗೆ ತಾಯಿಯೇ ದೇವರಾಗಿದ್ದರು.
1921ರಲ್ಲಿ ಲಾಲ್ ಬಹದ್ದೂರರು ಮೊದಲ ಬಾರಿಗೆ ಗಾಂಧೀಜಿ, ಬಾಲಗಂಗಾಧರ ತಿಲಕ್ ವರನ್ನು ನೋಡಿದರು. ಗಾಂಧೀಜಿಯವರ ಕರೆಗೆ ಓಗೊಟ್ಟು ಶಾಸ್ತ್ರಿ ಅವರು ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು, 1921ಕ್ಕೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
ಮೆಟ್ರಿಕ್ ಅಧ್ಯಯನವನ್ನು ತ್ಯಜಿಸಿ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದರು. ಆದರೆ ಹುಡುಗ ಚಿಕ್ಕವನು ಎಂಬ ಕಾರಣದಿಂದ ಬ್ರಿಟೀಷರು ಇವರನ್ನು ಬಂಧಿಸಲಿಲ್ಲ.
ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಒಡಕು ಉಂಟುಮಾಡುತ್ತದೆ ಎಂದು ಬಲವಾಗಿ ನಂಬಿದ್ದರು. ಇದಕ್ಕಾಗಿ ಅವರು ಎಳವೆಯಲ್ಲಿ ತಮ್ಮ ಮನೆತನದ ಹೆಸರನ್ನು ( ಸರ್ನೇಮ್) ತ್ಯಜಿಸಿದ್ದರು. ಮೆಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಕಾಶಿ ವಿದ್ಯಾಪೀಠ ಸೇರಿ ನಾಲ್ಕುವರ್ಷಗಳ ಕಾಲ ವ್ಯಾಸಂಗ ಮಾಡಿ “ಶಾಸ್ತ್ರಿ” ಪದವಿ ಪಡೆದರು.
1927ರಲ್ಲಿ ಲಲಾಮಣಿಯೊಂದಿಗೆ ಲಾಲ್ ಬಹದ್ದೂರ್ ಶಾಸ್ತ್ರಿಗಳ ವಿವಾಹವಾಯಿತು. ಆಗಿನ ಕಾಲದಲ್ಲಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆಯನ್ನು ಕಟುವಾಗಿ ವಿರೋಧಿಸಿದ್ದರು. ತಮ್ಮ ಮದುವೆಯಲ್ಲಿ ಪತ್ನಿಯ ಮನೆಯಿಂದ ಏನನ್ನೂ ಸ್ವೀಕರಿಸಲು ಇಷ್ಟಪಟ್ಟಿರಲಿಲ್ಲ. ಶಾಸ್ತ್ರಿ ಅವರ ಮಾವನವರು ಹಲವು ಬಾರಿ ಮನವಿ ಮಾಡಿದ ಮೇಲೆ ಅವರು ಪಡೆದ ಉಡುಗೊರೆ ಒಂದು ಚರಕ ಮತ್ತು ಗಜಗಳ ಖಾದಿ ಬಟ್ಟೆ.
ಲಾಲ್ ಬಹದ್ದೂರರು ಅನೇಕ ಸತ್ಯಾಗ್ರಹಗಳ ಮುಂದಾಳತ್ವ ವಹಿಸಿ ಸೆರೆವಾಸ ಅನುಭವಿಸಿದರು. ಸೆರೆಮನೆಯಲ್ಲಿ ಯಾವುದೇ ವಿಶೇಷ ಅನುಕೂಲಗಳನ್ನೂ ಬಯಸಲಿಲ್ಲ. ಸ್ವಾತಂತ್ರ್ಯಾ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ ವಲ್ಲಭ ಪಂತ್ ಅವರ ಆಡಳಿತದಲ್ಲಿ ಶಾಸ್ತ್ರಿ ಅವರು ಪೆÇಲೀಸ್ ಮತ್ತು ಸಾರಿಗೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ಬಹುದೊಡ್ಡ ಬದಲಾವಣೆ ತಂದರು. ಮೊದಲ ಬಾರಿಗೆ ಹೆಣ್ಣುಮಕ್ಕಳನ್ನು ಬಸ್ ನಿರ್ವಾಹಕರಾಗಿ ನೇಮಕ ಮಾಡಿದರು. ನಂತರದಲ್ಲಿ ಭಾರತ ಸರ್ಕಾರದ ರೈಲ್ವೇ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದರು.
ಬಾಲ್ಯದಿಂದಲೆ ಕಷ್ಟ ಸಹಿಷ್ಣುತೆಯನ್ನು ಬೆಳೆಸಿಕೊಂಡ ಇವರು ನೆಹರೂ ಮಂತ್ರಿಮಂಡಲದಲ್ಲಿ ಕೇಂದ್ರ ಸರ್ಕಾರದ ರೈಲು ಮಂತ್ರಿ ಆಗಿದ್ದರು. ಸಾಮಾನ್ಯ ಪ್ರಯಾಣಿಕರ ಅನುಕೂಲದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ದುರದೃಷ್ಟವೆಂಬಂತೆ 1956ರಲ್ಲಿ ನಡೆದ ರೈಲು ದುರ್ಘಟನೆಯಾದ ಅರೆಯಲೂರು ರೈಲು ದುರಂತ’ ಸಂಭವಿಸಿತು.
ಇವರದೇನು ತಪ್ಪಿಲ್ಲ ಎಂದು ಸರ್ಕಾರ ಹಾಗೂ ಸಾರ್ವಜನಿಕರು ಘೋಷಿಸಿದರೂ ಸಹ ಮನಃಶಾಂತಿ ಇಲ್ಲದೆ ನೂರಾರು ಜನರ ಸಾವು-ನೋವುಗಳು ಸಂಭವಿಸಿದರ ಬಗ್ಗೆ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪಂಡಿತ್ ನೆಹರು ಅವರೇ ಸ್ವತಃ ಇವರ ಕರ್ತವ್ಯ ನಿಷ್ಠೆಯ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು : –
“ಶಾಸ್ತ್ರೀಜಿ ತತ್ವಸಾಧನೆಗಾಗಿ ತಮ್ಮ ಕರ್ತವ್ಯ ಪಥದಲ್ಲಿ ತ್ಯಾಗಜೀವಿಗಳೂ, ಕಷ್ಟಸಹಿಷ್ಣುಗಳು, ಧೀರೋದಾತ್ತ ಗುಣದವರು. ಇವರ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆಗೆ ಪ್ರಥಮ ಸ್ಥಾನ. ಇವರ ಬಗ್ಗೆ ನನಗೆ ಅಪಾರ ಗೌರವವಿದೆ. ನಂಬಿಕೆ ಇದೆ. ಕೇವಲ ನಂಬಿಕೆ ಅಲ್ಲ, ಆತ್ಮನಂಬಿಕೆ. ಇವರ ಸೇವೆ, ಸಹಕಾರ ನನಗೆ ಕೊನೆಯವರೆಗೂ ಅಗತ್ಯ.”
“ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆ ಹೊರಡಿಸಿದ ಶಾಸ್ತ್ರೀಜಿಯವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಕೆಲವೊಮ್ಮೆ ದಿನವೂ ಹದಿನೆಂಟು ಗಂಟೆಗಳ ಕಾಲ ಕರ್ತವ್ಯವನ್ನು ನಿದ್ದೆಗೆಟ್ಟು ನಿರ್ವಹಿಸುತ್ತಿದ್ದರು.
ಪ್ರಧಾನಿಯಾಗಿದ್ದಾಗಲೂ ಶಾಸ್ತ್ರಿ ಅವರ ಬಳಿ ಓಡಾಡಲು ಸ್ವಂತ ಕಾರು ಇರಲಿಲ್ಲ. ಮನೆಯ ಸದಸ್ಯರ ಒತ್ತಾಯ ಹೆಚ್ಚಾದಾಗ, ಫಿಯೆಟ್ ಕಾರೊಂದನ್ನು ಖರೀದಿಸಲು ನಿರ್ಧರಿಸಿದರು. ಆದರೆ, ಅದರ ಬೆಲೆ ? 12 ಸಾವಿರ ಇತ್ತು. ಶಾಸ್ತ್ರಿ ಅವರ ಬಳಿ ?5 ಸಾವಿರ ಕಡಿಮೆಯಿತ್ತು. ಇದಕ್ಕಾಗಿ ಅವರು ಬ್ಯಾಂಕ್ ಒಂದಕ್ಕೆ ವಾಹನ ಸಾಲದ ಅರ್ಜಿ ಗುಜರಾಯಿಸಿದರು.
ತಕ್ಷಣ ಸಾಲವೇನೂ ಸಿಕ್ಕಿತು. ಆದರೆ, ಬ್ಯಾಂಕ್ ಅಧಿಕಾರಿಯನ್ನು ಕರೆದು ಇಷ್ಟೇ ಕ್ಷಿಪ್ರವಾಗಿ ಎಲ್ಲ ಗ್ರಾಹಕರಿಗೂ ಸಾಲ ಸೌಲಭ್ಯ ಸಿಗುತ್ತಿದೆಯೇ? ಎಂದು ವಿಚಾರಿಸಿಕೊಂಡಿದ್ದರು.
1961ರಲ್ಲಿ ಶಾಸ್ತ್ರಿಗಳು ಭಾರತದ ಗೃಹ ಮಂತ್ರಿಗಳಾದರು. ಈ ಅವಧಿಯಲ್ಲಿ ಚೀನಾ-ಭಾರತದ ಬಾಂಧವ್ಯ ಹದಗೆಟ್ಟಿತ್ತು. ಶಾಸ್ತ್ರಿಗಳು ಈ ಸಮಸ್ಯೆಯನ್ನು ಬಹು ಸಮರ್ಥವಾಗಿ ನಿರ್ವಹಿಸಿದರು.
ಆಗ ತಾನೆ ಸ್ವಾತಂತ್ರ್ಯಗಳಿಸಿದ್ದರಿಂದ, ಹಾಗೂ ಚೀನಾದ ಆಕ್ರಮಣದಿಂದ ದೇಶದ ಆರ್ಥಿಕ ಸ್ಥಿತಿ ಆಷ್ಟಾಗಿ ಚೆನ್ನಾಗಿರಲಿಲ್ಲ. ಆಗ ಇವರು ಬ್ರಿಟನ್, ಕೆನಡಾ, ಈಜಿಪ್ಟ್, ರಶಿಯ ಮೊದಲಾದ ಅಲಿಪ್ತ ರಾಷ್ಟ್ರಗಳಿಗೆ ಭೇಟಿ ನೀಡಿ, ಭಾರತದ ಆರ್ಥಿಕ ಸ್ಥಿತಿಯನ್ನು ವಿವರಿಸಿ, ಸ್ನೇಹಹಸ್ತ ಚಾಚಿ ಪರಿಸ್ಥತಿಯನ್ನು ನಿಭಾಯಿಸಿದರು. 1965ರ ಭಾರತ ಪಾಕಿಸ್ತಾನ ಯುದ್ಧವನ್ನು ಅತೀ ಚಾಣಾಕ್ಷತನದಿಂದ ನಿಭಾಯಿಸಿದರು. ಹಿಂದೆ ಎರಡು ಹೃದಯಾಘಾತಗಳಿಂದ ನರಳಿದ್ದ ಶಾಸ್ತ್ರಿಯವರು
ರಷಿಯಾದ ಮಧ್ಯಸ್ತಿಕೆಯಲ್ಲಿ ಭಾರತ ಪಾಕಿಸ್ತಾನದ ನಡುವೆ ಒಪ್ಪಂದಕ್ಕಾಗಿ ರಷಿಯಾದ ತಾಷ್ಕೆಂಟ್ಗೆ ಹೋದಾಗ ಅಂದರೆ ಜನವರಿ 11, 1966 ರಂದು ಮೂರನೆಯ ಬಾರಿಯ ಹೃದಯ ಸ್ತಂಭನದಿಂದ ಸಾವಿಗೀಡಾದರು. ವಿದೇಶೀ ನೆಲದಲ್ಲಿ ನಿಧನರಾದ ಏಕೈಕ ಭಾರತೀಯ ಪ್ರಧಾನ ಮಂತ್ರಿಗಳು ಲಾಲ್ ಬಹದ್ದೂರ್ ಶಾಸ್ತ್ರಿಯವರು.
18 ತಿಂಗಳುಗಳ ಕಾಲ ಪ್ರಧಾನಿಗಳಾಗಿದ್ದ ಶಾಸ್ತ್ರೀಜಿಯವರಿಗೆ 1966ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.