ಶಾಸಕ ಸಾ.ರಾ ಮಹೇಶ್ ಗೆ ಜಾಮೀನು ರಹಿತ ವಾರೆಂಟ್

ಮೈಸೂರು: ಕೆ.ಆರ್.ನಗರ ಶಾಸಕ ಸಾ.ರಾ ಮಹೇಶ್ ಅವರಿಗೆ ಮೈಸೂರಿನ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಶಾಸಕ ಸಾ.ರಾ. ಮಹೇಶ್ ಅವರು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಸ್. ಲೋಕೇಶ್ ಹೊಸರಾಮನಹಳ್ಳಿ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದು ನ್ಯಾಯಾಲಕ್ಕೆ ಹಾಜರಾಗಿ ಸಾಕ್ಷಿ ಹೇಳದೆ, ಪದೇಪದೇ ಗೈರು ಹಾಜರಾಗುತ್ತಿದ್ದರು.

ಈ ಹಿನ್ನೆಲೆಯಲ್ಲಿ ಮೈಸೂರಿನ ನ್ಯಾಯಾಲಯವು ಶಾಸಕ ಸಾ.ರಾ ಮಹೇಶ್ ಹಾಗೂ ಮತ್ತಿಬ್ಬರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.