ನವವಿವಾಹಿತೆ ಆತ್ಮಹತ್ಯೆ

ಮೈಸೂರು: ಕೌಟುಂಬಿಕ ಕಲಹದಿಂದ ಬೇಸರಗೊಂಡ ನವವಿವಾಹಿತೆ ಸಾವಿಗೆ ಶರಣಾದ ಘಟನೆ ಮೈಸೂರಲ್ಲಿ
ನಡೆದಿದೆ.

ಕ್ಯಾತ ಮಾರನಹಳ್ಳಿಯಲ್ಲಿ ಪ್ರಿಯಾಂಕ (19) ಮೃತಪಟ್ಟ ನತದೃಷ್ಟೆ.


ಉದಯಗಿರಿ ನಿವಾಸಿಯಾಗಿದ್ದ ಪ್ರಿಯಾಂಕ ತಾನು ಪ್ರೀತಿಸುತ್ತಿದ್ದ ಕ್ಯಾತಮಾರನಹಳ್ಳಿಯ ವಿಜಯ್ ಎಂಬುವನೊಂದಿಗೆ ನಾಲೈದು ತಿಂಗಳ ಹಿಂದೆಯಷ್ಟೇ ಪೆÇೀಷಕರ ವಿರೋಧದ ನಡುವೆಯೂ ವಿವಾಹವಾಗಿದ್ದರು.

ಆದರೆ ಪತಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಕಾರಣ ಮನ ನೊಂದು ಪ್ರಿಯಾಂಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

ವಿಜಯ್ ಪ್ರತಿದಿನ ಕುಡಿದು ಬಂದು ತಮ್ಮ ಮಗಳಿಗೆ ಹಿಂಸೆ ನೀಡುತ್ತಿದ್ದ. ಆತನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪ್ರಿಯಾಂಕ ಪೆÇೀಷಕರು ಉದಯಗಿರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.